ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ – vishwanews24
ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ
ನವದೆಹಲಿ : ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಆರು ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಪ್ರವೇಶ್ ವರ್ಮಾ, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರರಾಜ್, ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪಂಕಜ್ ಸಿಂಗ್ ಅವರ ಹೆಸರುಗಳು ಸೇರಿವೆ. ಪ್ರವೇಶ್ ವರ್ಮಾ ಅವರು ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.
ಕಪಿಲ್ ಮಿಶ್ರಾ ಕರವಾಲ್ ನಗರದಿಂದ ಶಾಸಕರಾಗಿದ್ದಾರೆ. ಮಂಜಿಂದರ್ ಸಿಂಗ್ ಸಿರ್ಸಾ ರಾಜೌರಿ ಗಾರ್ಡನ್ ಕ್ಷೇತ್ರದ ಶಾಸಕರು. ಆಶಿಶ್ ಸೂದ್ ಜನಕ್ಪುರಿಯ ಶಾಸಕರು. ಪಂಕಜ್ ಸಿಂಗ್ ವಿಕಾಸಪುರಿಯ ಶಾಸಕರು. ರವೀಂದ್ರ ಇಂದ್ರರಾಜ್ ಬವಾನದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
BJP's first-time MLA Rekha Gupta takes oath as the Chief Minister of Delhi. Lt Governor VK Saxena administers her oath of office.
With this, Delhi gets its fourth woman CM, after BJP's Sushma Swaraj, Congress' Sheila Dikshit, and AAP's Atishi. pic.twitter.com/Eomgp9r1Rk
— ANI (@ANI) February 20, 2025
ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಮತ್ತು ಅತಿಶಿ ನಂತರ ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿ ಮತ್ತು ಆರು ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಮುಖ್ಯಮಂತ್ರಿ ಮತ್ತು ಹೊಸ ಕ್ಯಾಬಿನೆಟ್ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಚಿಕ್ಕಮಗಳೂರು: ಕಾಮೇನಹಳ್ಳಿ ಫಾಲ್ಸ್ ಗೆ ಬಿದ್ದು ವಿದ್ಯಾರ್ಥಿ ಮೃತ್ಯು – vishwanews24
