ದೇಶ ಮತ್ತು ಸಂವಿಧಾನ ಅಪಾಯದಲ್ಲಿರುವುದರಿಂದ ನಾನು ರಾಜಕಾರಣಕ್ಕೆ ಬಂದೆ : ಪ್ರಿಯಾಂಕ ಗಾಂಧಿ – Vishwanews24
ಅಲಹಾಬಾದ್:ಗಂಗಾಯಾತ್ರೆ’ಯ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಮತ್ತು ಸಂವಿಧಾನ ಅಪಾಯದಲ್ಲಿರುವುದರಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬಂದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ನಾನು ಮನೆಯಲ್ಲಿ ಕುಳಿತಿದ್ದೆ. ನಾನು ಮನೆಯಲ್ಲೇ ಕುಳಿತಿರಬಹುದಿತ್ತು. ಆದರೆ ನಾನಿಂದು ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದ್ದೇನೆ, ಅದಕ್ಕೆ ಕಾರಣವೇನು? ದೇಶ ಮತ್ತು ಸಂವಿಧಾನ ಅಪಾಯದಲ್ಲಿದ್ದಕ್ಕೆ ನಾನು ಮುಂದಡಿ ಇಡಬೇಕಾಯಿತು ಎಂದರು.
ನಿಮ್ಮ ಮತ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಿ ನಿಮಗಾಗಿ ಕೆಲಸ ಮಾಡುವ ಸರಕಾರವನ್ನು ಅಧಿಕಾರಕ್ಕೆ ತನ್ನಿ. ಇದು ಎಲ್ಲರು ಎಚ್ಚೆತ್ತುಕೊಳ್ಳಬೇಕಾದ ಸಮಯ. ದೇಶವನ್ನು ಒಡೆಯುವವರ ವಿರುದ್ಧ ರಾಹುಲ್ ಆರಂಭಿಸಿರುವ ಹೋರಾಟಕ್ಕೆ ಬಲ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
