ದೇಶ ವಿಭಜನೆಯ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ ಮಾತಿಗೆ ಈಗಲೂ ಬದ್ಧ , ತಾಕತ್ತಿದ್ದರೆ ಕೇಸ್ ಹಾಕಲಿ : ಈಶ್ವರಪ್ಪ – Vishwanews24

Featured, ರಾಜ್ಯ ನ್ಯೂಸ್

ದೇಶ ವಿಭಜನೆಯ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ ಮಾತಿಗೆ ಈಗಲೂ ಬದ್ಧ , ತಾಕತ್ತಿದ್ದರೆ ಕೇಸ್ ಹಾಕಲಿ : ಈಶ್ವರಪ್ಪ

ಶಿವಮೊಗ್ಗ: ದೇಶ ವಿಭಜನೆಯ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧ. ಅವರಿಗೆ ತಾಕತ್ತಿದ್ದರೆ ಕೇಸ್ ಹಾಕಲಿ. ಸಂಸದ ಡಿ.ಕೆ‌.ಶಿವಕುಮಾರ್ ದಕ್ಷಿಣ ಭಾರತವನ್ನು ವಿಭಜಿಸುವ ಹೇಳಿಕೆ ನೀಡಿದ್ದಾರೆ. ವಿನಯ್ ಕುಲಕರ್ಣಿ ಹಾಗೂ ಡಿ.ಕೆ‌.ಶಿವಕುಮಾರ್ ಬೆಂಬಲ ನೀಡಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇದನ್ನು ಖಂಡಿಸಿದ್ದಾರೆ. ಹೀಗಿರುವಾಗ ಎಚ್.ಕೆ.ಪಾಟೀಲ್ ಈ ರೀತಿ ಮಾತನಾಡಿರುವುದು ಅಚ್ಚರಿ ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, 24 ಗಂಟೆಯೊಳಗೆ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೇಸ್ ದಾಖಲಿಸಲಾಗುವುದು ಎಂಬ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪಾಟೀಲ್ ತಂದೆ ರಾಷ್ಟ್ರ ಭಕ್ತರಾಗಿದ್ದವರು. ಅವರ ಬಗ್ಗೆ ಗೌರವ ಇದೆ. ಅವರು ಕೇಸ್ ಹಾಕಲಿ ಎಂದು ಆಗ್ರಹಿಸುತ್ತೇನೆ. ಆಗ ಕೋರ್ಟ್ ಗೆ ಮಲ್ಲಿಕಾರ್ಜುನ ಖರ್ಗೆ ಸಹ ಬರಬೇಕಾಗುತ್ತದೆ. ನ್ಯಾಯಾಲಯವು ದೇಶ ದ್ರೋಹಿಗಳಿಗೆ ಮನ್ನಣೆ ನೀಡುತ್ತದೆಯೋ, ರಾಷ್ಟ್ರ ಭಕ್ತರಿಗೆ ಮನ್ನಣೆ ನೀಡುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.

ದಕ್ಷಿಣ ಕನ್ನಡ ಕಾಂಗ್ರೆಸ್​​ನಲ್ಲಿ ಟಿಕೆಟ್​ಗೆ ಭಾರೀ ಪೈಪೋಟಿ ; ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ – Vishwanews24

ಮಂಡ್ಯ ಬಗ್ಗೆ ಮಾತನಾಡಿ, ಇದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ. ಬಂದ್ ಯಶಸ್ವಿ ಬಗ್ಗೆ ಸಂತೋಷವಾಗಿಲ್ಲ. ಬದಲಿಗೆ ಈ ದೇಶದಲ್ಲಿ ಹನುಮ ಧ್ವಜ ಹಾರಿಸಲು ಅವಕಾಶ ಇಲ್ಲವಲ್ಲ‌ ಎಂದು ಬೇಸರವಾಗುತ್ತಿದೆ. ಮುಂದೆ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಬಗ್ಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ. ಇದರ ಭಾಗವಾಗಿಯೇ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯಲ್ಲೂ ಅವರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದು ಸಹ ಅದರ ಒಂದು ಭಾಗವೇ ಆಗಿದೆ. ಅವರು ಎಷ್ಟೇ ಎಫ್ಐಆರ್ ದಾಖಲಿಸಲಿ ನಾವು ಹೆದರುವುದಿಲ್ಲ. ರಾಷ್ಟ್ರಭಕ್ತರಾದ ನಾವು ಇದನ್ನು ಎದುರಿಸುತ್ತೇವೆ ಎಂದರು.

ಉಡುಪಿ: ಅಯೋಧ್ಯೆ ಬಾಲರಾಮನಿಗೆ ಶ್ರೀ ಕಾಶಿಮಠ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ – Vishwanews24

Leave a Reply