ದೇಶ ಸೇವೆಯಲ್ಲಿ ಇಂದಿರಾ ಗಾಂಧಿಯ ನಡೆಯನ್ನೇ ಅನುಸರಿಸುತ್ತೇನೆ :ಪ್ರಿಯಾಂಕ ಗಾಂಧಿ ಭರವಸೆ – Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಕಾನ್ಪುರ, :  ದೇಶ ಸೇವೆಯ ವಿಚಾರದಲ್ಲಿ ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ನಡೆಯನ್ನೇ ಅನುಸರಿಸುತ್ತೇನೆ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭರವಸೆ ನೀಡಿದ್ದಾರೆ.

ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ತಮ್ಮನ್ನು ತಾವು ಹೋಲಿಸಿಕೊಳ್ಳುವುದಿಲ್ಲ. ಇಂದಿರಾಜಿಯವರ ಮುಂದೆ ನಾನು ಏನೂ ಅಲ್ಲ. ಆದರೆ ಅವರ ಹೃದಯದಲ್ಲಿದ್ದ ಸೇವೆಯ ಆಸೆಯು ನನ್ನ ಮತ್ತು ಸೋದರನ ಹೃದಯದಲ್ಲಿಯೂ ಇದೆ. ಇದರಿಂದ ನಮ್ಮನ್ನು ಯಾರು ಪ್ರತ್ಯೇಕಿಸಲಾರರು ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ನೀವು ನಮಗೆ ಅವಕಾಶ ನೀಡುತ್ತೀರೋ, ಇಲ್ಲವೋ ಆದರೆ ನಿಮ್ಮ ಸೇವೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ದೇಶದ ಹಿತಕ್ಕಿಂತಲೂ ಕೇವಲ ಅವರ ಏಳಿಗೆ ಕುರಿತಷ್ಟೇ ಕಾಳಜಿ ಹೊಂದಿದ್ದಾರೆ. ಬಿಜೆಪಿ ಸರ್ಕಾರವು ಕೇವಲ ಪ್ರಚಾರ ಮತ್ತು ತೋರ್ಪಡಿಕೆಯ ಕೆಲಸವಸ್ಟೇ ಮಾಡುತ್ತಿದೆ ಎಂದು ತಿಳಿಸಿದರು.