ದೇಶಕ್ಕೆ ಕಾಂಗ್ರೆಸ್ ಅಗತ್ಯ ಇದೆ ; ಏಪ್ರಿಲ್ನಲ್ಲಿ  ದೊಡ್ಡ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ : ಮಧು ಬಂಗಾರಪ್ಪ -Vishwanews24

Featured, ರಾಜ್ಯ ನ್ಯೂಸ್

ದೇಶಕ್ಕೆ ಕಾಂಗ್ರೆಸ್ ಅಗತ್ಯ ಇದೆ ; ಏಪ್ರಿಲ್ನಲ್ಲಿ  ದೊಡ್ಡ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ : ಮಧು ಬಂಗಾರಪ್ಪ -Vishwanews24

ಬೆಂಗಳೂರು: ‘ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಅವರು ಹೇಳಿದ್ದಾರೆ’ ಎಂದು ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಧು ಬಂಗಾರಪ್ಪ, ‘ಏಪ್ರಿಲ್ ತಿಂಗಳಲ್ಲಿ ಸೊರಬ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ’ ಎಂದರು.

ಹೆಜಮಾಡಿ ದುಬಾರಿ ಟೋಲ್ ; ಮಾರ್ಚ್15 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಮುಂದಾದ ಖಾಸಗಿ ಬಸ್ ಮಾಲಕರು -Vishwanews24

‘ಸಿದ್ದರಾಮಯ್ಯ ಹಿರಿಯರು, ಅವರು ಮುಖ್ಯಮಂತ್ರಿ ಆಗಿದ್ದವರು. ನಮ್ಮ ತಂದೆನೂ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡ್ತೇನೆ’ ಎಂದೂ ತಿಳಿಸಿದರು.

‘ಎಚ್. ಡಿ. ಕುಮಾರಸ್ವಾಮಿ ದ್ರೋಹ ಬಗೆದರೇ?’ ಎಂದು ಕೇಳಿದ ಪ್ರಶ್ನೆಗೆ, ‘ನಾನು ಆ ಬಗ್ಗೆ ಏನೂ ಹೇಳುವುದಿಲ್ಲ‌. ನನಗೆ ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅಗತ್ಯ ಇದೆ. ನನ್ನ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕವಾಗಿ ಏನೂ ಇಲ್ಲ. ಈಗ ಯಾವುದೇ ಚರ್ಚೆ ಬೇಡ. ಇವತ್ತು ಮನಸಾರೆ ಕಾಂಗ್ರೆಸ್‌ಗೆ ಹೋಗಿದ್ದೇನೆ’ ಎಂದರು.

ಪುತ್ತೂರು : ಗೋಡಂಬಿ ಬೀಜ ಗಂಟಲಲ್ಲಿ ಸಿಲುಕಿ ಬಾಲಕ ಸಾವು -Vishwanews24

‘ಕಾಂಗ್ರೆಸ್ ಪಕ್ಷ ನನ್ನನ್ನು ಹೇಗೆ ಉಪಯೋಗಿಸಿಕೊಳ್ಳುತ್ತೊ ಹಾಗೇ ಕೆಲಸ ಮಾಡುತ್ತೇನೆ. ಚುನಾವಣೆ ಅನ್ನೋದು ಪರೀಕ್ಷೆ ಥರ. ಪಾಸ್ ಫೇಲ್ ಥರ.. ಇಬ್ಬರೇ ಅಲ್ಲಿ ಪಾಸಾಗೋದು. ಆದರೆ ನಾಯಕತ್ವ ಎಂದೂ ಸೋಲುವುದಿಲ್ಲ. ನಾನು ಜೆಡಿಎಸ್‌ನಲ್ಲಿ ಯಾವತ್ತೂ ಅಧಿಕಾರ ಅನುಭವಿಸಿಲ್ಲ. ಕಾಂಗ್ರೆಸ್‌ನಲ್ಲಿ ಬೆಳೆಯಲು ಅವಕಾಶ ಇದೆ, ಅದಕ್ಕೆ ಸೇರ್ಪಡೆ ಆಗುತ್ತಿದ್ದೇನೆ’ ಎಂದು ಸಮರ್ಥನೆ ನೀಡಿದರು.

ಜಾರಕಿಹೊಳಿ ಸಿಡಿ ಪ್ರಕರಣ : ಪೊಲೀಸರಿಗೆ ತನಿಖೆಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದೇವೆ : ಬಸವರಾಜ ಬೊಮ್ಮಾಯಿ -Vishwanews24