ದೇಶದ ಕಾರ್ಯಕರ್ತರಿಗೆ ಹಾಗೂ ಪಕ್ಷದ ನಾಯಕರಿಗೆ ರಾಹುಲ್ ಗಾಂಧಿ ಸ್ಫೂರ್ತಿ, ಅವರು ಪಕ್ಷದ ಮುಖ್ಯಸ್ಥರಾಗಿ ವಾಪಾಸಾಗುವುದು ಕೋಟ್ಯಂತರ ಕಾರ್ಯಕರ್ತರ ಬಯಕೆ: ಕಾಂಗ್ರೆಸ್ -Vishwanews24

Featured, ರಾಜ್ಯ ನ್ಯೂಸ್

ನವದೆಹಲಿ: ಪಕ್ಷದ ಸೈದ್ಧಾಂತಿಕ ಚಿಂತನೆಯನ್ನು ಅತ್ಯುತ್ತಮವಾಗಿ ನಿರ್ಹಿಸುವ ರಾಹುಲ್ ಗಾಂಧಿ ತಮ್ಮ ಉನ್ನತ ನಾಯಕ ಆಗಬೇಕೆಂದು ಹಾಗೂ ವಾಪಸ್ ಮರಳುವಂತೆ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಬಯಸಿದ್ದಾರೆ ಎಂದು  ಪಕ್ಷ ತಿಳಿಸಿದೆ.

ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುತ್ತಿದ್ದು, ಕಾರ್ಯಕರ್ತರ ಬೇಡಿಕೆಯನ್ನು ರಾಹುಲ್ ಗಾಂಧಿ ಒಪ್ಪಲಿದ್ದು, ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಸುಪ್ರಿಯಾ ಶ್ರೀನೇಟ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರು ಪಕ್ಷದ ಉನ್ನತ ನಾಯಕರಾಗಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಚಿಂತನೆಯನ್ನು ಅವರಿಗಿಂತ ಉತ್ತಮವಾಗಿ ಯಾರೂ ನಿರ್ವಹಿಸುವುದಿಲ್ಲ   ಎಂದು ನಾವು ಭಾವಿಸುತ್ತೇವೆ. ದೇಶದ ಕಾರ್ಯಕರ್ತರಿಗೆ ಹಾಗೂ ಪಕ್ಷದ ನಾಯಕರಿಗೆ ರಾಹುಲ್ ಗಾಂಧಿ ಸ್ಫೂರ್ತಿಯಾಗಿದ್ದಾರೆ.

ದೇಶಾದ್ಯಂತ ಕೋಟ್ಯಾಂತರ ಕಾರ್ಯಕರ್ತರು ರಾಹುಲ್ ಗಾಂಧಿ ವಾಪಾಸುವುದನ್ನು ಬಯಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಕೇವಲ ಮಧ್ಯಂತರ ಪಕ್ಷದ ಮುಖ್ಯಸ್ಥರಾಗಿರುವುದರಿಂದ ಕಾಂಗ್ರೆಸ್ ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದು ಮತ್ತು ಬದಲಿ ಸ್ಥಾನಕ್ಕೆ ಉತ್ತಮ ನಾಯಕನನ್ನು ಕಂಡುಕೊಳ್ಳುವಂತೆ ಪಕ್ಷವನ್ನು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ಶೀಘ್ರವೇ ಸಮಾವೇಶ ನಡೆಸಲಿದೆ.