ದೇಶದ ಗೌರವ ಉಳಿಸಲು ಗೌತಮ್‌ ಅದಾನಿಯನ್ನು ಬಂಧಿಸಿ : ಡಿಸಿಎಂ – vishwanews24

Featured, ರಾಜ್ಯ ನ್ಯೂಸ್

ದೇಶದ ಗೌರವ ಉಳಿಸಲು ಗೌತಮ್‌ ಅದಾನಿಯನ್ನು  ಬಂಧಿಸಿ :  ಡಿಸಿಎಂ

ಬೆಂಗಳೂರು: ದೇಶದ ಗೌರವ ಉಳಿಸುವ ಸಲುವಾಗಿ ಕೇಂದ್ರ ಸರ್ಕಾರ ಉದ್ಯಮಿ ಗೌತಮ್‌ ಅದಾನಿ ಅವರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ  ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಈವರೆಗೆ ಉದ್ಯಮಿ ಗೌತಮ್‌ ಅದಾನಿ ಅವರನ್ನು ರಕ್ಷಿಸುತ್ತಾ ಬಂದಿದೆ. ಈಗ ಅಮೆರಿಕದ ನ್ಯಾಯಾಲಯ ಗೌತಮ್‌ ಅದಾನಿ ಅಧಿಕಾರಿಗಳಿಗೆ ಲಂಚ ನೀಡಿ ವಿದ್ಯುತ್‌ ಹಂಚಿಕೆ ಯೋಜನೆ ಪಡೆದಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವಂತೆ ಆದೇಶಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌತಮ್‌ ಅದಾನಿ ಅವರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಭಾರಿ ಮುನ್ನಡೆ ; ವಿಜಯೋತ್ಸವಕ್ಕೆ ಕಾರ್ಯಕರ್ತರ ಭರ್ಜರಿ ಸಿದ್ಧತೆ – vishwanews24

ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗೌತಮ್‌ ಅದಾನಿ ಅವರ ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. ಇದೀಗ ಅಮೆರಿಕ ನ್ಯಾಯಾಲಯ ಗೌತಮ್‌ ಅದಾನಿ ಅವರನ್ನು ಬಂಧಿಸುವಂತೆ ಆದೇಶಿಸಿದೆ. ಮುಖ್ಯಮಂತ್ರಿಗಳು ಸೇರಿದಂತೆ ವಿಪಕ್ಷದ ನಾಯಕರನ್ನು ಬಂಧಿಸುವ ಕೇಂದ್ರ ಸರ್ಕಾರ ಈಗ ಅದಾನಿ ಅವರನ್ನು ಬಂಧಿಸಿ ದೇಶದ ಮರ್ಯಾದೆ ಉಳಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಗೌತಮ್‌ ಅದಾನಿ ಅವರನ್ನು ರಕ್ಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ದೇಶದ ಜನಸಾಮಾನ್ಯರು ಅದಾನಿ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಿರುವ ಸಾವಿರಾರು ಕೋಟಿಯನ್ನು ರಕ್ಷಿಸುವುದಕ್ಕೆ ಮುಂದಾಗಬೇಕು ಎಂದು ಕೋರಿದರು.

ಕಾರ್ಕಳ: ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಸ್ಥಳದಲ್ಲೇ ಸಾವು – vishwanews24

Leave a Reply