ದೇಶದ ತೆರಿಗೆ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆ ತಂದ ಕೇಂದ್ರ ಸರಕಾರದ ಈ ನೀತಿಯನ್ನು ಸ್ವಾಗತಿಸುತ್ತೇವೆ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24

Featured, ಉಡುಪಿ

ಕೇಂದ್ರ ಸರಕಾರದ ಈ ತೆರಿಗೆ ನೀತಿಯನ್ನು ದೇಶದ ಸಾಮಾನ್ಯ ಜನರಲ್ಲದೇ ನಾನೂ ಕೂಡ ಸ್ವಾಗತಿಸುತ್ತೇನೆ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಸರಕು ಮತ್ತು ಸೇವಾ ತೆರಿಗೆಯ ವ್ಯವಸ್ಥೆಯಲ್ಲಿನ ಸೇವಾ ತೆರಿಗೆ (ಜಿ.ಎಸ್.ಟಿ) ಹಂತಗಳನ್ನು ಕಡಿಮೆ ಮಾಡಿ ಮಹತ್ವದ ಬದಲಾವಣೆಗಳನ್ನು ಕೇಂದ್ರ ಸರಕಾರದ ಜಿ.ಎಸ್.ಟಿ ಮಂಡಳಿಯು ನಿರ್ಧರಿಸಿದೆ.

ಈ ಹಿಂದೆ 4 ಜಿ.ಎಸ್.ಟಿ ಯ ಹಂತಗಳಿದ್ದು, ಅದನ್ನು 2 ಹಂತಗಳಾಗಿ (ಶೇ.5% ಮತ್ತು ಶೇ.18%) ನಿಗಧಿಪಡಿಸಿದ್ದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯ ನಿಟ್ಟಿನಲ್ಲಿ ಬದಲಾವಣೆ ತಂದಿರುವುದು ಒಂದು ದಿಟ್ಟ ಹೆಜ್ಜೆ ಆಗಿರುತ್ತದೆ. ಆರೋಗ್ಯ, ಜೀವಾ ವಿಮೆ, ಕ್ಷೀರೋತ್ಪನ್ನ, ಜೀವ ರಕ್ಷಕ ಔಷಧಗಳು ಹಾಗೂ ನಿತ್ಯ ಬಳೆಕೆಯ ವಸ್ತುಗಳಿಗೆ ಇದು ಅನ್ವಯವಾಗುವುದರಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯನ್ನು ತಂದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೆತೃತ್ವದ ಕೇಂದ್ರ ಸರಕಾರದ ಈ ತೆರಿಗೆ ನೀತಿಯನ್ನು ದೇಶದ ಸಾಮಾನ್ಯ ಜನರಲ್ಲದೇ ನಾನೂ ಕೂಡ ಸ್ವಾಗತಿಸುತ್ತೇವೆ.

ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ – vishwanews24

ಈ ತೆರಿಗೆ ನೀತಿಯ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರ ಜೀವನ ಶೈಲಿಯಲ್ಲಿ ಸುಧಾರಣೆಯಾಗುವುದು ಮಹತ್ವದ ಸಂಗತಿಯಾಗಿರುತ್ತದೆ. ಅಲ್ಲದೆ ಜಿಎಸ್‌ಟಿ ದರವನ್ನು ಗಣನೀಯವಾಗಿ ಇಳಿಮುಖ ಮಾಡಿದ್ದರಿಂದ ದೇಶದ ಜಿ.ಡಿ.ಪಿ ಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

 

Leave a Reply