ದೇಶದ ಭದ್ರತೆಗೆ ಮಹತ್ವದ ಕೆಲಸ ;ಇಸ್ರೋದಿಂದ ಉಪಗ್ರಹ ರಿಸ್ಯಾಟ್​ -2ಬಿ ಉಡಾವಣೆ ಯಶಸ್ವಿ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಹರಿಕೋಟ: ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿ ಸಿ 46 ಉಪಗ್ರಹ ಉಡಾವಣೆಯನ್ನು ಇಂದು ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಯಶಸ್ವಿಯಾಗಿ ನಡೆಸಿದೆ.

ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಡೆಸಿದ, ಪಿಎಸ್‌ಎಲ್‌ವಿ ಸಿ 46 ಉಪಗ್ರಹ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.

ನಸುಕಿನ 5.30ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್‌ ಧವನ್‌ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆಯನ್ನು ನಡೆಸಲಾಗಿದೆ. ಇದು ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ, ನೈಸರ್ಗಿಕ ವಿಕೋಪ ನಿರ್ವಹಣೆ, ಹಾಗೂ ಉಗ್ರರ ಕಾರ್ಯ ಚಟುವಟಿಕೆ ಮೇಲೆ ಕಣ್ಗಾವಲು ಸೇರಿದಂತೆ ರಿಸ್ಯಾಟ್ ಸಹಕಾರಿಯಾಗಲಿದೆ.

615 ಕೆಜಿ ತೂಕದ ರಿಸ್ಯಾಟ್‌ 2 ಬಿ ಉಪಗ್ರಹ ಭೂಮಿಯಿಂದ 557 ಕಿ.ಮೀ ಎತ್ತರದಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ.ಮಿಷನ್ ಅತ್ಯುತ್ತಮ ಯಶಸ್ಸು ಪಡೆದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಟ್ವೀಟ್‌ ಮಾಡಿದೆ.

ಗಡಿ ಭದ್ರತೆಯ ವಿಚಾರವಾಗಿ ಉಪಗ್ರಹ ಮಹತ್ವದ ಕೆಲಸ ನಿರ್ವಹಿಸಲಿದ್ದು, ದಟ್ಟ ಮೋಡಗಳು ಕವಿದಿದ್ದರೂ ಗಡಿಯಲ್ಲಿನ ಚಿತ್ರಗಳನ್ನುಸೆರೆ ಹಿಡಿಯುವ ಸಾಮರ್ಥ್ಯವನ್ನು ಉಪಗ್ರಹ ಹೊಂದಿದೆ.