ದೇಶದ ರಾಜಕೀಯಕ್ಕೆ ಪ್ರಿಯಾಂಕಾ ಅಗತ್ಯವಿದೆ, ಅವರ ಆಗಮನದಿಂದ ಕಾಂಗ್ರೆಸ್ ಗೆ ಬಲ, ಹಾಗೂ ಮೋದಿಗೆ ನಡುಕವುಂಟಾಗಿದೆ : ಜನಾರ್ದನ ಪೂಜಾರಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದೇಶದ ರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ ಅಗತ್ಯವಿದೆ. ಆಕೆ ಸಕ್ರಿಯ ರಾಜಕಾರಣಕ್ಕೆ ಮರಳಿರುವುದು ಪ್ರಧಾನಿ ನರೇಂದ್ರ ಮೋದಿ ನಿದ್ದೆಗೆಡಿಸಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ ಅವರು, ಜನರು ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾ ಗಾಂಧಿ ವರ್ಚಸ್ಸನ್ನು ಕಾಣುತ್ತಿದ್ದಾರೆ. ಉತ್ತರ ಪ್ರದೇಶ ಮಾತ್ರವಲ್ಲದೆ, ಇದು ದೇಶಕ್ಕೆ ರಾಜಕೀಯಕ್ಕೂ ಅಗತ್ಯವಿದೆ ಎಂದರು.

ಪ್ರಿಯಾಂಕ ಗಾಂಧಿಯವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುರಿಂದ ಕಾಂಗ್ರೆಸ್ ದೊಡ್ಡ ಶಕ್ತಿ ಬಲಬಂದಂತಾಗಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಗೆ ನಡುಕವುಂಟಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.

ಗಾಂಧಿ ಕುಟುಂಬದ ಪ್ರಿಯಾಂಕ ಅವರನ್ನು ಕರೆಸಿರುವುದು ರಾಹುಲ್‌ಗಾಂಧಿ ನಾಯಕತ್ವಕ್ಕೆ ಬಲಬಂದಂತಾಗಿದೆ. ಈ ಉದ್ದೇಶದಿಂದಲೇ ಅವರನ್ನು ಕರೆಸಿಕೊಳ್ಳಲಾಗಿದೆ. ಎಂದರು.

ಇನ್ನೂ ಪ್ರಿಯಾಂಕಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂಬ ಘೋಷಣೆ ಹೊರಬಿದ್ದ ಕೂಡಲೇ ದೇಶದ ಜನತೆ ಸಂಭ್ರಮ ವ್ಯಕ್ತಪಡಿಸಿದ್ದಾರೆ ಎಂದರು.