ದೇಶದಲ್ಲಿ ಕೊವೀಡ್ -19 ಪ್ರಕರಣಗಳು 20 ಲಕ್ಷ ಗಡಿ ದಾಟಿದ್ದು, ಮೋದಿ ಸರ್ಕಾರ ನಾಪತ್ತೆಯಾಗಿದೆ : ರಾಹುಲ್ ಗಾಂಧಿ -Vishwanews24
ನವದೆಹಲಿ: ಭಾರತದಲ್ಲಿ 20 ಲಕ್ಷ ಕೊವೀಡ್ -19 ಸಕ್ರಿಯ ಪ್ರಕರಣಗಳು ದಾಟುತ್ತಿದ್ದಂತೆ ರಾಹುಲ್ ಗಾಂಧಿ ಶುಕ್ರವಾರ ತನ್ನ ಹಳೆಯ ಟ್ವೀಟ್ ವೊಂದನ್ನು ನೆನಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ದೇಶದಲ್ಲಿ ಕೊವೀಡ್ -19 ಪ್ರಕರಣಗಳು 20 ಲಕ್ಷ ಗಡಿ ದಾಟಿದ್ದು, ಮೋದಿ ಸರ್ಕಾರ ನಾಪತ್ತೆಯಾಗಿದೆ.
ಭಾರತದಲ್ಲಿ ಕೊವೀಡ್ -19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದು, ಜುಲೈ ೧೭ರದು ೧೦ಲಕ್ಷ ದಾಟಿದ ಕೋವಿಡ್ ಪ್ರಕರಣಗಳು ಆಗಸ್ಟ್ 10 ರ ಹೊತ್ತಿಗೆ 20 ಲಕ್ಷ ಗಡಿ ದಾಟಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
20 लाख का आँकड़ा पार,
ग़ायब है मोदी सरकार। https://t.co/xR9blQledY— Rahul Gandhi (@RahulGandhi) August 7, 2020
