ದೇಶದಲ್ಲಿ ಹೊಸ ಶಕೆ ಆರಂಭ – ಇಂಡಿ ಒಕ್ಕೂಟ ಸರ್ಕಾರ ರಚಿಸುವುದು ಗ್ಯಾರಂಟಿ : ರಾಹುಲ್ ಗಾಂಧಿ – vishwanews24
ದುರಹಂಕಾರ ಮತ್ತು ದಬ್ಬಾಳಿಕೆಯ ಈ ಸರಕಾರಕ್ಕೆ ಕೊನೆ ಮೊಳೆ ಹೊಡೆಯಬೇಕು : ರಾಹುಲ್ ಗಾಂಧಿ
ನವದೆಹಲಿ : ದುರಹಂಕಾರ ಮತ್ತು ದಬ್ಬಾಳಿಕೆಯ ಪ್ರತೀಕವಾಗಿರುವ ಈ ಸರಕಾರಕ್ಕೆ ಕೊನೆ ಮೊಳೆ ಹೊಡೆಯಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರನ್ನು ಒತ್ತಾಯಿಸಿದರು.
ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಇದುವರೆಗಿನ ಟ್ರೆಂಡ್ಗಳ ಪ್ರಕಾರ, ವಿರೋಧ ಪಕ್ಷಗಳ ಇಂಡಿ ಒಕ್ಕೂಟ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಗಾಂಧಿ ಹೇಳಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ನನ್ನ ಆಯ್ಕೆ : ಮಲ್ಲಿಕಾರ್ಜುನ ಖರ್ಗೆ – vishwanews24
ಈ ಬಿಸಿಲಿನ ಬೇಗೆಯಲ್ಲಿಯೂ ನೀವೆಲ್ಲರೂ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಮತ ಚಲಾಯಿಸಲು ಹೊರಟಿದ್ದೀರಿ ಎಂದು ನನಗೆ ಹೆಮ್ಮೆ ಇದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹಿಂದಿಯಲ್ಲಿ ಎಕ್್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಹಂಕಾರ ಮತ್ತು ದೌರ್ಜನ್ಯದ ಪ್ರತೀಕವಾಗಿರುವ ಈ ಸರಕಾರಕ್ಕೆ ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಿಮ ಮತವನ್ನು ಕೊನೆ ಮೊಳೆಯನ್ನಾಗಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.ಜೂನ್ 4 ರ ಸೂರ್ಯ, ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲು ನಿರ್ಧರಿಸಿದಾಗ, ದೇಶದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಗಾಂಧಿ ಹೇಳಿದರು.
ಕುಂದಾಪುರ : ತಾ. ಆಸ್ಪತ್ರೆ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ :ಪ್ರಕರಣ ದಾಖಲು – vishwanews24
ಸಂಸತ್ತಿನ ಚುನಾವಣೆಗೆ ಇದು ಕೊನೆಯ ಹಂತದ ಮತದಾನವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂಡಿ ಒಕ್ಕೂಟ ಸರ್ಕಾರವನ್ನು ರಚಿಸಲಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
