ದೋಸ್ತಿ ಸರ್ಕಾರದಲ್ಲಿ ಮತ್ತೊಂದು ಭಿನ್ನ ಮತ ಸ್ಪೋಟ ; ಶಿಕ್ಷಣ ಸಚಿವ ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಖಡಕ್ ಎಚ್ಚರಿಕೆ

Featured, ಜಿಲ್ಲೆ

ಚಾಮರಾಜನಗರ: ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಭಾರಿ ಅಸಮಧಾನದ ಬಳಿಕ ಮೈತ್ರಿ ಸರ್ಕಾರದಲ್ಲಿ ಇನ್ನೊಂದು ಅಸಮಾಧಾನ ಬಹಿರಂಗಗೊಂಡಿದ್ದು ಸಚಿವರ ವಿರುದ್ಧ ಇನ್ನೋರ್ವ ಸಚಿವರು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪುಟ್ಟರಂಗ ಶೆಟ್ಟಿ ಅವರು ಬಿಎಸ್‌ಪಿಯ ಶಾಸಕ ಮತ್ತು ಸಚಿವ ಎನ್‌.ಮಹೇಶ್‌ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿ ಕಿಡಿ ಕಾರಿದ್ದಾರೆ.

ಅವನ್ಯಾರು ನಮ್ಮನ್ನು ಕಿತ್ತು ಹಾಕುವುದಕ್ಕೆ? ನಾವು ಮನಸ್ಸು ಮಾಡಿದರೆ ಅವನೇ ಕಿತ್ತೋಗುತ್ತಾನೆ ಎಂದು ಸಚಿವ ಪುಟ್ಟರಂಗ ಶೆಟ್ಟಿ ಕಿಡಿ ಕಾರಿದ್ದಾರೆ.

ಅವನು ತಿಳಿದುಕೊಳ್ಳಬೇಕು ಅವನು ಒನ್‌ ಮ್ಯಾನ್‌ ಆರ್ಮಿ ಎಂದು .ಜೆಡಿಎಸ್‌ 36 , ಕಾಂಗ್ರೆಸ್‌ 80 ಸ್ಥಾನ ಹೊಂದಿದೆ.  ಕಾಂಗ್ರೆಸ್‌ ಮನಸ್ಸು ಮಾಡಿದರೆ ಎನ್‌.ಮಹೇಶ್‌ ಹೋಗ್ತಾನೆ. ಈಗ ತಾನೇ ಕಣ್‌ಬಿಟ್ಟು ಎಲ್ಲವನ್ನೂ ಮಾಡುತ್ತೇನೆ ಎನ್ನುವುದು ಸರಿಯಲ್ಲ ಎಂದರು.

ಕಾಂಗ್ರೆಸ್‌ ಕಳೆಯನ್ನು ಬುಡ ಸಮೇತ ಕಿತ್ತು ಹಾಕುವುದಾಗಿ ಸಚಿವ ಎನ್‌.ಮಹೇಶ್‌ ಹೇಳಿಕೆ ನೀಡಿದ ವಿರುದ್ದ ಪುಟ್ಟರಂಗ ಶೆಟ್ಟಿ  ಈ ಪರಿಯಲ್ಲಿ ಕಿಡಿ ಕಾರಿದ್ದಾರೆ.