ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ – vishwanews24
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ
ಬೆಂಗಳೂರು: 2025-26ನೇ ಸಾಲಿನ ದ್ವೀತಿಯ ಪಿಯು ಪರೀಕ್ಷೆಯಲ್ಲಿ ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದ.ಕ ಜಿಲ್ಲೆ ದ್ವೀತಿಯ ಸ್ಥಾನ ಪಡೆದಿದೆ.
ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿ ಮೂಡುಬಿದಿರೆಯ ದಿಶಾ ಕಾಮರ್ಸ್ ವಿಭಾಗದಲ್ಲಿ ಶೇಖಡಾ 100ಅಂಕ ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಅಧಿಕೃತ ವೆಬ್ಸೈಟ್ ನಲ್ಲಿ ಸರ್ವರ್ ಸಮಸ್ಯೆ ಉಂಟಾದರೆ, ಫಲಿತಾಂಶ ನೋಡಲು ಅದಕ್ಕಿಂತ ಸುಲಭವಾಗಿ ಬದಲೀ ಮಾರ್ಗವಿದೆ. ಈಗಾಗಲೇ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ ಈಗಾಗಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲು ಸಿದ್ಧವಾಗಿದೆ. ಮೊಬೈಲ್ನಲ್ಲಿ ಸಂಪೂರ್ಣ ಫಲಿತಾಂಶವನ್ನು ನೋಡುವ ಸುಲಭ ವಿಧಾನವಿದೆ.
ಕೇಂದ್ರ ಸರ್ಕಾರದ ಡಿಜಿಲಾಕರ್ ಸೌಲಭ್ಯ ಬಳಸಿ, ಫಲಿತಾಂಶ ಪ್ರಕಟವಾದ ಕೂಡಲೇ ನಿಮ್ಮ ಅಂಕಪಟ್ಟಿಯನ್ನು ಮೊಬೈಲ್ನಲ್ಲೇ ಪಡೆಯಬಹುದು. ಈ ಡಿಜಿಟಲ್ ಅಂಕಪಟ್ಟಿಗೆ ಅಧಿಕೃತ ಮಾನ್ಯತೆಯೂ ಇದೆ.
ಅಂಕಪಟ್ಟಿ ಪಡೆಯುವ ಹಂತಗಳು:
ನಿಮ್ಮ ಫೋನ್ನಲ್ಲಿ DigiLocker ಆಪ್ ಡೌನ್ಲೋಡ್ ಮಾಡಿ ಅಥವಾ ವೆಬ್ಸೈಟ್ ತೆರೆಯಿರಿ
“Education and Learning” ವಿಭಾಗವನ್ನು ಆಯ್ಕೆ ಮಾಡಿ
“KSEAB” ಅನ್ನು ಹುಡುಕಿ ಕ್ಲಿಕ್ ಮಾಡಿ
“2nd PUC Marksheet” ಆಯ್ಕೆಮಾಡಿ
ನಿಮ್ಮ ನೋಂದಣಿ ಸಂಖ್ಯೆ ಮತ್ತು ವರ್ಷ (2026) ನಮೂದಿಸಿ
ಸಬ್ಮಿಟ್ ಮಾಡಿದ ಬಳಿಕ ನಿಮ್ಮ ಫಲಿತಾಂಶ ಕಾಣಿಸುತ್ತದೆ.
ಅದನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಡಿಜಿಟಲ್ ಅಂಕಪಟ್ಟಿಯಲ್ಲಿ QR ಕೋಡ್ ಹಾಗೂ ಡಿಜಿಟಲ್ ಸಹಿ ಇರುತ್ತದೆ. ಇದು ಮೂಲ ಅಂಕಪಟ್ಟಿಯಷ್ಟೇ ಮಾನ್ಯವಾಗಿದ್ದು, ಕಾಲೇಜು ಪ್ರವೇಶ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಬಳಸಬಹುದು. ವೆಬ್ಸೈಟ್ ಸಮಸ್ಯೆಗಳಿಲ್ಲದೆ ಸುಲಭವಾಗಿ ಫಲಿತಾಂಶ ನೋಡಲು ಇದು ಅತ್ಯುತ್ತಮ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ.
