ಧರ್ಮಸ್ಥಳ : ಕೋಟಿ– ಚೆನ್ನಯರ ಅನನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವ ಜನರಿಗೆ ಸ್ಫೂರ್ತಿ : ಡಾ. ಡಿ.ವೀರೇಂದ್ರ ಹೆಗ್ಗಡೆ -Vishwanews24
ಏ. 22 ರಿಂದ 24ರ ವರೆಗೆ ಪಡುಮಲೆಯಲ್ಲಿ ಕೋಟಿ- ಚೆನ್ನಯ ನವೀಕೃತ ದೈವಸ್ಥಾನದ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ: ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರ ಬಿಡುಗಡೆ..
ತುಳುನಾಡಿನ ಅಮರ ವೀರರಾದ ಕೋಟಿ– ಚೆನ್ನಯರ ಅನನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವ ಜನರಿಗೆ ಸ್ಫೂರ್ತಿ : ಡಾ. ಡಿ.ವೀರೇಂದ್ರ ಹೆಗ್ಗಡೆ -Vishwanews24
ಧರ್ಮಸ್ಥಳ: ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನದಲ್ಲಿ ನವೀಕೃತ ದೈವಸ್ಥಾನದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಏಪ್ರಿಲ್ 22 ರಿಂದ 24ರ ವರೆಗೆ ಜರುಗಲಿದ್ದು, ಆಮಂತ್ರಣ ಪತ್ರವನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ತುಳುನಾಡಿನ ಅಮರ ವೀರರಾದ ಕೋಟಿ– ಚೆನ್ನಯರು ಸತ್ಯ, ಧರ್ಮ, ನ್ಯಾಯ ಪರಿಪಾಲನೆಗಾಗಿ ನಡೆಸಿದ ಅವಿರತ ಹೋರಾಟ, ಅನನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವ ಜನರಿಗೆ ಸ್ಫೂರ್ತಿ ಎಂದು ಹೇಳಿದ ಡಾ. ಹೆಗ್ಗಡೆಯವರು, ತುಳುನಾಡಿನ ಸಹೃದಯ ಅಭಿಮಾನಿಗಳು, ಭಕ್ತಾದಿಗಳ ಸಹಕಾರದೊಂದಿಗೆ ಎಲ್ಲ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಶಾಸಕ ಕೆ. ಹರೀಶ್ ಪೂಂಜ, ಸಮಿತಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ , ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ದ.ಕ.:ಹೆಚ್ಚುತ್ತಿರುವ ಕೊರೊನಾ ಸೋಂಕು : ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ :ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ -Vishwanews24
