ಧರ್ಮಸ್ಥಳ ಪ್ರಕರಣ : 11ನೇ ಪಾಯಿಂಟ್ನಲ್ಲಿ ಸಿಗದ ಅಸ್ಥಿಪಂಜರ – vishwanews24
ಧರ್ಮಸ್ಥಳ ಪ್ರಕರಣ : 11ನೇ ಪಾಯಿಂಟ್ನಲ್ಲಿ ಸಿಗದ ಅಸ್ಥಿಪಂಜರ
ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆ.5 ರಂದು 11 ನೇ ಗುರುತು ಮಾಡಿದ ಸ್ಥಳದಲ್ಲಿ 11:30 ರಿಂದ 1:55 ರವರೆಗೆ ದೂರುದಾರನ ಜೊತೆ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳ ಜೊತೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. 6 ಅಡಿ ಗುಂಡಿ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಲಿಲ್ಲ. ಕೊನೆಗೆ ಹಿಟಾಚಿ ಮೂಲಕ ಅಗೆದ ಜಾಗವನ್ನು ಮುಚ್ಚಲಾಯಿತು.
ಉಡುಪಿ: ಬರಹಗಾರ, ಪತ್ರಕರ್ತ ಮತ್ತು ಅಂಕಣಕಾರ ಮರವಂತೆ ಪ್ರಕಾಶ್ ಪಡಿಯಾರ್ ನಿಧನ – vishwanews24
