ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ – vishwanews24

Featured, ಉಡುಪಿ

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ

ಇತಿಹಾಸ ಪ್ರಸಿದ್ಧ ಕಾಪು ಹಳೆ ಶ್ರೀ ಮಾರಿಯಮ್ಮ ದೇವಸ್ಥಾನ, ಹೊಸ ಶ್ರೀ ಮಾರಿಗುಡಿ ದೇವಸ್ಥಾನ, ಮೂರನೇ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾರ್ದೆ ಮಾರಿಪೂಜೆ ನವಂಬರ್ 24 ಮತ್ತು 25 ರಂದು ನಡೆಯಲಿದೆ.

ಬುಧವಾರ ಸಂಜೆವರೆಗೆ ಮಾರಿ ಪೂಜೆಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ಮಾರಿಯಮ್ಮ ದೇವಿಯ ದರ್ಶನದ ಬಳಿಕ ವಿಸರ್ಜನೆ ನಡೆಯಲಿದೆ.

ಸಂಬಂಧಿಕರನ್ನು ಬೀಳ್ಕೊಡಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ ; 36 ಸಾವಿರ ದಂಡ – vishwanews24

ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದೇ ಎಂಬ ಹೆಗ್ಗಳಿಕೆ ಗಳಿಸಿರುವ ಕಾಪುವಿನ ಮೂರು ಮಾರಿಗುಡಿಯಲ್ಲಿ ನಡೆಯುವ ಮಾರಿ ಪೂಜೆಗೆ ಊರ – ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ರೂಪದಲ್ಲಿ ಹೂವಿನ ಪೂಜೆ ಸಹಿತ ನಾನಾ ಸೇವೆಗಳನ್ನು ನಡೆಸುತ್ತಾರೆ.

Leave a Reply