ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ : ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ – Vishwanews24
ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ : ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ
ಬೆಂಗಳೂರು : ಕರ್ನಾಟಕ ಡೈರಿ ಮಾರುಕಟ್ಟೆಯನ್ನು ಅಮುಲ್ ಪ್ರವೇಶಿಸುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಮತ್ತು ಅಮುಲ್ ಅನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಬಗ್ಗೆ ಸಾಕಷ್ಟು ಗೊತ್ತಿಲ್ಲದವರು ಮಾತ್ರ ತಪ್ಪು ಮಾತುಗಳನ್ನು ಹೇಳಲು ಸಾಧ್ಯ ಎಂದು ಹೇಳಿದ ಎಂದು ಹೇಳಿದ್ದಾರೆ.
ನಂದಿನಿ ಉತ್ಪನ್ನಗಳು ಅಮುಲ್ ಸೇರಿದಂತೆ ಯಾವುದೇ ಬ್ರಾಂಡ್ ನಿಂದ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿವೆ. ಕೆಎಂಎಫ್ ಅಸುರಕ್ಷಿತವಾಗುವ ಪ್ರಶ್ನೆಯೇ ಇಲ್ಲ. ಎಸ್.ಎಂ.ಕೃಷ್ಣ ಅವರ ಕಾಲದಿಂದಲೂ ಕೆಎಂಎಫ್ ಸದೃಢ ಮತ್ತು ಲಾಭದಾಯಕವಾಗಿದೆ’ ಎಂದು ಸೋಮಶೇಖರ್ ಹೇಳಿದರು.
ಚುನಾವಣಾ ಪ್ರಚಾರ ಮಾಡುವ ನಟರ ಚಲನಚಿತ್ರಗಳ ಪ್ರದರ್ಶನಕ್ಕೆ ತಡೆ ನೀಡಲು ಸಾಧ್ಯವಿಲ್ಲ : ಚುನಾವಣಾ ಆಯೋಗ – Vishwanews24
