ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್​ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್​ ರಾಜ್​ಕುಮಾರ್- Vishwanews24

Featured, ರಾಜ್ಯ ನ್ಯೂಸ್

ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್​ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್​ ರಾಜ್​ಕುಮಾರ್- Vishwanews24

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸ್ವೀಕರಿಸಿದರು.

ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್​ನಲ್ಲಿ ಮಂಗಳವಾರ ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಡಾ.ರಾಜ್​ಕುಮಾರ್ ಕುಟುಂಬಸ್ಥರು ಆಗಮಿಸಿದರು.

ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್​ನಲ್ಲಿ ಮಂಗಳವಾರ ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಡಾ.ರಾಜ್​ಕುಮಾರ್ ಕುಟುಂಬಸ್ಥರು ಆಗಮಿಸಿದರು. ನಟ ರಾಘವೇಂದ್ರ ರಾಜ್​ಕುಮಾರ್ ಮತ್ತು ಪತ್ನಿ, ನಟ ವಿನಯ್ ರಾಜ್​ಕುಮಾರ್, ಪುನೀತ್​ರ ಅಕ್ಕ ಲಕ್ಷ್ಮೀ ಗೋವಿಂದು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು.

ಇತ್ತೀಚೆಗೆ ಅಶ್ವಿನಿ ಅವರನ್ನು ಭೇಟಿಯಾಗಿದ್ದ ಕುಲಪತಿ ಪ್ರೊ.ಹೇಮಂತ್ ಕುಮಾರ್​ ನೇತೃತ್ವದ ನಿಯೋಗ, ಪುನೀತ್​ ಅವರಿಗೆ ಗೌರವ ಡಾಕ್ಟರೇಟ್ ಕೊಡುವ ​ಬಗ್ಗೆ ಚರ್ಚಿಸಿತ್ತು. ಶತಮಾನೋತ್ಸವ ಪೂರೈಸಿರುವ ಮೈಸೂರು ವಿವಿಯು ಈ ಬಾರೀ ಅಪ್ಪು ಅವರಿಗೆ ಡಾಕ್ಟರೇಟ್ ಪದವಿ ಕೊಟ್ಟದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪುನೀತ್​ ರಾಜ್​ಕುಮಾರ್(ಮರಣೋತ್ತರ), ​ವಿಜ್ಞಾನಿ ಡಾ.ವಿ.ಕೆ.ಆತ್ರಿ ಮತ್ತು ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಹಿಜಾಬ್ ತೀರ್ಪು: ಬಂದ್ ಕರೆ ನೀಡಿದ ಸಂಘಟನೆಗಳ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅರ್ಜಿ – Vishwanews24

 

Leave a Reply