ನನಗೆ ಸೂರ್ಯನನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ಇದೆ : ನಿತ್ಯಾನಂದ ಸ್ವಾಮೀಜಿ -Vishwanews24

Featured, ರಾಜ್ಯ ನ್ಯೂಸ್
ಬೆಂಗಳೂರು: ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಅಂದು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ ಎಂದು ನಿತ್ಯಾನಂದ ಸ್ವಾಮೀಜಿ  ಅನುಯಾಯಿಗಳ ಮುಂದೆ ತಿಳಿಸಿದ್ದಾನೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಡದಿಯ ತನ್ನ ಆಶ್ರಮದಲ್ಲಿ ಅನುಯಾಯಿಗಳಿಗೆ ಇತ್ತೀಚೆಗೆ ಪ್ರವಚನ ನೀಡುವಾಗ ಬೆಳಗ್ಗೆ ಧ್ವಜಾರೋಹಣ 6.40 ರಿಂದ 7 ಗಂಟೆಯೊಳಗೆ ಮುಗಿಯಬೇಕು. ಆದರೆ, ಇಂದು ನಾನು ಧ್ವಜಾರೋಹಣಕ್ಕೆ ಬರುವುದು ಸ್ವಲ್ಪ ತಡವಾಯಿತು. ಹಾಗಾಗಿ ನಾನು ದ್ವಜಾರೋಹಣ ಮುಗಿಸುವವರೆಗೂ ಉದಯಿಸದಂತೆ ಸೂರ್ಯನಿಗೆ ತಿಳಿಸಿದ್ದೆ. ಅದರಂತೆ ಇಂದು ಸೂರ್ಯ 40 ನಿಮಿಷ ತಡವಾಗಿ ಉದಯಿಸಿದ್ದಾನೆ.ನನಗೆ ಸೂರ್ಯನನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನನಗಿದೆ ಎಂದು ಹೇಳಿಕೊಂಡಿದ್ದಾನೆ.

ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ ಗೂಗಲ್​ನಲ್ಲಿ ಇಂದು ಬಿಡದಿಯಲ್ಲಿ ಸೂರ್ಯೋದಯವಾಗಬೇಕಿದ್ದ ಸಮಯ ಮತ್ತು ಸೂರ್ಯೋದಯವಾದ ಸಮಯವನ್ನು ಪರೀಕ್ಷಿಸಿ. ನಾನು ಧ್ವಜಾರೋಹಣ ಮುಗಿಸಿ ಹೊರಬಂದಾಗ ಸೂರ್ಯ ಪೂರ್ವದಲ್ಲಿ ಉದಯಿಸುತ್ತಿದ್ದ. ಮೋಡಗಳಿಂದಾಗಿ ಸೂರ್ಯೋದಯ ತಡವಾಗಲಿಲ್ಲ ಎಂಬುದನ್ನು ನೀವು ಗಮನಿಸಬಹುದು ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾನೆ. ವಿ