ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ : ಪ್ರಮೋದ್ ಮುತಾಲಿಕ್ – Vishwanews24
ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ : ಪ್ರಮೋದ್ ಮುತಾಲಿಕ್
ಉಡುಪಿ: ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಮಂಗಳವಾರ ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಚರ್ಮಗಂಟು ರೋಗ ಹೆಚ್ಚಳ : ʼಘಾಟಿ ಸುಬ್ರಹ್ಮಣ್ಯ ದೇವಾಲಯದ ರಾಸುʼಗಳ ಜಾತ್ರೆ ರದ್ದು – Vishwanews24
ʻಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿʼʼ ಎಂದು ಪ್ರಮೋದ್ ಮುತಾಲಿಕ್ ಅವರು ಸಚಿವ ಸುನಿಲ್ ಕುಮಾರ್ಗೆ ಮನವಿ ಮಾಡಿದರು.
ತಮ್ಮ ಟೀಮ್ಗೆ ಟಿಕೆಟ್ ಕೊಟ್ಟರೂ ಕೊಡದಿದ್ದರೂ ಸ್ಪರ್ಧೆಗೆ ಇಳಿಯೋದು ಗ್ಯಾರಂಟಿ ಎಂದು ಹಠ ತೊಟ್ಟಿರುವ ಪ್ರಮೋದ್ ಮುತಾಲಿಕ್ ಅವರು ಇಂಧನ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಅವರ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ.
ಹೋರಿ ಬೆದರಿಸುವ ಹಬ್ಬ : ಕೊಬ್ಬರಿ ಹೋರಿ ತಿವಿದು ಯುವಕ ಸಾವು ,12ಕ್ಕೂ ಅಧಿಕ ಮಂದಿಗೆ ಗಾಯ – Vishwanews24
