ನನ್ನ ಕೊನೆ ಉಸಿರು ಇರುವವರೆಗೆ ಪಕ್ಷಕ್ಕಾಗಿ ಎಂತಹ ರಾಜಿ ಬೇಕಾದರು ಮಾಡಿಕೊಳ್ಳುತ್ತೇನೆ : ಸಿ.ಟಿ ರವಿ -Vishwanews24
ಬೆಂಗಳೂರು: ಪ್ರವಾಸೋದ್ಯಮ ಖಾತೆ ನೀಡಿರುವುದಕ್ಕೆ ಅಸಮಾಧಾನಗೊಂಡಿದ್ದ ಸಿ.ಟಿ ರವಿ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ. ಸಚಿವ ಸ್ಥಾನಕ್ಕಾಗಿ ನಾನು ಲಾಭಿ ಮಾಡಿರಲಿಲ್ಲ. ಇಂತಹ ಖಾತೆಯೇ ನನಗೆ ನೀಡಬೇಕು ಎಂದು ನಾನು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಮತ್ತು ಹುದ್ದೆ ನನ್ನು ಪಕ್ಷದ ತತ್ವ ಮತ್ತು ನಿಷ್ಠೆಯ ನಡುವೆ ಬರುವುದಿಲ್ಲ. ನಾನು ಬದುಕಿದ್ದರು ಅಥವಾ ಸತ್ತಿದ್ದರು ನಾನು ಎಂದಿಗೂ ಬಿಜೆಪಿಯಲ್ಲಿ ಇರುತ್ತೇನೆ. ಬಿಜೆಪಿ ಪಕ್ಷದ ಮೇಲಿರುವ ನಿಷ್ಠೆಗೆ ಅನುಸಾರವಾಗಿ ಅಧಿಕಾರ ಮತ್ತು ಹುದ್ದೆ ನಡುವೆ ರಾಜಿ ಮಾಡಿಕೊಳ್ಳುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೆ ಪಕ್ಷಕ್ಕಾಗಿ ಎಂತಹ ರಾಜಿ ಬೇಕಾದರು ಮಾಡಿಕೊಳ್ಳುತ್ತೇನೆ ಎಂದು ಸಿ.ಟಿ ರವಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
“ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ ? ? ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅಯ್ಯೋ ಪಾಪ. ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲಾ, ಜನಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ. ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನಾನು ಇರುವುದು ಬಿಜೆಪಿಯಲ್ಲಿ ಸಾಯುವುದು ಕೂಡ ಬಿಜೆಪಿಯಲ್ಲೇ” ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ..
