ನನ್ನ ಜನ್ಮದಿನದಂದು ಯಾರೂ ಕೂಡ ಫ್ಲೆಕ್ಸ್ ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕಬೇಡಿ : ಸಚಿವ ಬಸವರಾಜ್ ಬೊಮ್ಮಾಯಿ ಮನವಿ -Vishwanews24

Featured, ರಾಜ್ಯ ನ್ಯೂಸ್

ನನ್ನ ಜನ್ಮದಿನದಂದು ಯಾರೂ ಕೂಡ ಫ್ಲೆಕ್ಸ್ ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕಬೇಡಿ : ಸಚಿವ ಬಸವರಾಜ್ ಬೊಮ್ಮಾಯಿ ಮನವಿ -Vishwanews24

ಬೆಂಗಳೂರು : ಜನವರಿ 28ರಂದು ನನ್ನ ಜನ್ಮ ದಿನ. ಇಂತಹ ಜನ್ಮ ದಿನವನ್ನು ಕೊರೋನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ. ಯಾವುದೇ ಕಾರ್ಯಕರ್ತರು ಫ್ಲೆಕ್, ಬ್ಯಾನರ್, ಹೋರ್ಡಿಂಗ್ಸ್ ಹಾಕಬೇಡಿ. ನಾನು ಅಂದು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೇನೆ. ಯಾರೂ ಶುಭಾಶಯ ತಿಳಿಸಲು ಬರಬೇಡಿ ಎಂಬುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಅವರು ದಿನಾಂಕ 28-01-2021, ಗುರುವಾರದಂದು ನನ್ನ ಜನ್ಮದಿನವಿದ್ದು, ಈ ಮೂಲಕ ವಿನಂತಿಸುವುದೇನೆಂದರೆ ನನ್ನ ಜನ್ಮದಿನದಂದು ಯಾರೂ ಕೂಡ ಫ್ಲೆಕ್ಸ್ ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕಬೇಡಿ. ಕೋವಿಡ್ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಉಡುಗೋರೆ, ಶಾಲು, ಮಾಲೆ, ಹೂಗುಚ್ಚಗಳೊಂದಿಗೆ ಶಿಭಾಶಯ ಕೋರಲು ಆಗಮಿಸಬಾರದೆಂದು ಮನವಿ ಮಾಡಿಕೊಳ್ಳುತ್ತೇನೆ.

ಅಲ್ಲದೇ ಆ ದಿನದಂದು ನಾನು ಇಲಾಖೆಗಳ ಕಾರ್ಯಕ್ರಮಗಳ ನಿಮಿತ್ಯ ಪ್ರವಾಸದಲ್ಲಿರುತ್ತೇನೆ. ಈ ಸಂಬಂಧ ಯಾವುದೇ ಚಟುವಟಿಕೆಗಳಿಗೆ ದುಂದು ವೆಚ್ಚ ಮಾಡದೇ, ಅದೇ ಹಣದಿಂದ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ಸೇವೆಗೈಯಿರಿ ಎಂದು ನನ್ನ ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ರೈತರ ಹೋರಾಟ : ಸಾವು-ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಖದ ಸಂಗತಿ : ಸಚಿವ ಯು.ಟಿ.ಖಾದರ್ -Vishwanews24

ದಾಂಧಲೆ ಮಾಡುವುದು ರೈತ, ದೇಶಭಕ್ತ ಮಾಡುವ ಕಾರ್ಯವಲ್ಲ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ : ನಳೀನ್ ಕುಮಾರ್ ಕಟೀಲ್ -Vishwanews24