ನನ್ನ ರಕ್ತನೇ ಕಾಂಗ್ರೆಸ್, ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ: ಹೆಚ್‌. ವಿಶ್ವನಾಥ್ – Vishwanews24

Featured, ರಾಜ್ಯ ನ್ಯೂಸ್

ನನ್ನ ರಕ್ತನೇ ಕಾಂಗ್ರೆಸ್, ನಾನು ಕಾಂಗ್ರೆಸ್ ಪಕ್ಷ  ಸೇರುತ್ತೇನೆ: ಹೆಚ್‌. ವಿಶ್ವನಾಥ್

ರಾಯಚೂರು: ನನ್ನ ರಕ್ತನೇ ಕಾಂಗ್ರೆಸ್ , ಹೌದು ನಾನು ಕಾಂಗ್ರೆಸ್ ಸೇರುತ್ತೇನೆ. ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಅಂತ ವಿಧಾನಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು. ಲಾ ಕೂಡ ಒಟ್ಟಿಗೆ ಮಾಡಿದ್ದೇವೆ. ರಾಜಕೀಯದಲ್ಲಿ ಸಿದ್ದರಾಮಯ್ಯಗಿಂತ ನಾನು ಹಿರಿಯ. ರಾಜಕಾರಣ ಒಂದು ಕುಟುಂಬ. ಅಣ್ಣ, ತಮ್ಮ ಮುನಿಸಿಕೊಂಡು ಹೊರಹೋಗ್ತಾರೆ ವಾಪಸ್ ಬರ್ತಾರೆ. ಪ್ರತಾಪ್‌ ಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೆ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಅಂತ ಕಿಡಿಕಾರಿದ್ದಾರೆ.

 ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ :  ಡಿಕೆಶಿ – Vishwanews24

ನಾನು ಸಾಹಿತ್ಯ ಕ್ಷೇತ್ರದ ಎಂಎಲ್‍ಸಿ ಬಿಜೆಪಿಎಂಎಲ್‍ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ಬಳಿಕ ನಾಮಿನೆಟ್ ಮಾಡಿದ್ದಾರೆ. ಬಹಳ ಜನರಿಗೆ ಇದು ಗೊತ್ತಿಲ್ಲ ನಾನು ಯಾವ ಪಕ್ಷದಲ್ಲಿಲ್ಲ ಸ್ವತಂತ್ರ ವ್ಯಕ್ತಿ. ಬಾಂಬೆ ಬಾಯ್ಸ್‌ನಲ್ಲಿ ಏನಿದೆ ಅನ್ನೋದು ಪುಸ್ತಕ ಬಿಡುಗಡೆಯಾದ ಮೇಲೆ ಗೊತ್ತಾಗುತ್ತೆ. ಸ್ಯಾಂಟ್ರೋ ರವಿ ಯಾರೂ ಅನ್ನೋದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಸುಮ್ನೆ ಗಾಳಿಪಟ ಬಿಟ್ಟಿದ್ದಾರೆ. ಅವರಿಗೆ ಅವನು ಚೆನ್ನಾಗಿ ಗೊತ್ತು. ಕುಮಾರಸ್ವಾಮಿ ರಾಜಕೀಯಕ್ಕೂ ಮೊದಲು ಸಿನೆಮಾ ಫೀಲ್ಡ್‌ನಲ್ಲಿದ್ದರು. ಎರಡು ಬಾರಿ ಸಿಎಂ ಆಗಿದ್ದವರು. ಅನುಭವಿಗಳು ಈ ರೀತಿಯ ವಿಚಾರಗಳನ್ನು ಹರಿ ಬಿಡುವುದು ಶೋಭೆಯಲ್ಲ. ಪ್ರತ್ಯಕ್ಷದರ್ಶಿ ತರಹ ಹೇಳುವವರು ಸಾಕ್ಷಿಗಳಿದ್ದರೆ ಇಂದೇ ತೋರಿಸಲಿ. ಕುಮಾರಸ್ವಾಮಿ ಹಿಟ್ ಅಂಡ ರನ್ ಬಿಡಬೇಕು ಎಂದು ವಿಶ್ವನಾಥ್ ಹೇಳಿದ್ದಾರೆ.

ಶಿವಮೊಗ್ಗ ಬಾಂಬ್ ಟ್ರಯಲ್ ಬ್ಲಾಸ್ಟ್ ಪ್ರಕರಣ : ಮಂಗಳೂರಿನ ಮಝೀನ್ ಅಬ್ದುಲ್ ರೆಹಮಾನ್ ಎನ್ಐಎ ವಶಕ್ಕೆ   – Vishwanews24

ಸಿದ್ದರಾಮಯ್ಯಗೆ ಕೋಲಾರದಲ್ಲಿ ನಿಲ್ಲಬೇಕು ಅನ್ನಿಸಿದೆ. ಅಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಅವರು ಅಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರರ ಅಂತಿಮ ತೀರ್ಮಾನ ಮಾಡುತ್ತಾರೆ. ಕೋಲಾರಕ್ಕೆ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಹೋಗುವುದು ಮುಂದೆ ನೋಡೋಣ. ಯಡಿಯೂರಪ್ಪನವರ ಶಕ್ತಿಯನ್ನು ಯಾರೂ ಅಲ್ಲಗೆಳೆಯಲು ಆಗಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply