ನನ್ನ ಸೋಲಿಗೆ ನಾನೇ ಜವಾಬ್ದಾರಿ ಹೊರತು ಬೇರಾರು ಅಲ್ಲ : ಮಿಥುನ್ ರೈ -Vishwanews24
ಮಂಗಳೂರು,: ಸೋಲು ಎನ್ನುವುದು ಅಂತಿಮ ಅಲ್ಲ . ಯಾಕೆಂದರೆ ರಾತ್ರಿಯಾದ ಮೇಲೆ ಹಗಲು ಬಂದಂತೆ ಸೋಲು ಕಂಡ ಮೇಲೆ ಗೆಲುವು ಬರಲೇಬೇಕು. ಹಾಗಾಗಿ ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಧೃತಿ ಗೆಡುವುದಿಲ್ಲ ಎಂದು ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ನನ್ನ ಪಾಲಿನ ಸಾರ್ವಜನಿಕ ಚುನಾವಣೆ ಪ್ರಯತ್ನವಷ್ಟೇ. ಸೋಲು ಗೆಲುವು ಪೂರಕ ಪದಗಳು ನನಗೆ ಮತದಾನ ಮಾಡಿದ ಮತದಾರರು, ಮುಖಂಡರು ಕಾರ್ಯಕರ್ತರಿಗೆ ಕೃತಜ್ಞನಾಗಿದ್ದೇನೆ. ನನ್ನ ಸೋಲಿಗೆ ನಾನೇ ಜವಾಬ್ದಾರಿ ಹೊರತು ಬೇರಾರು ಅಲ್ಲ.
ದ.ಕನ್ನಡದ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಶುಭ ಹಾರೈಸುತ್ತೇನೆ. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಚುರುಕುಗೊಳಿಸಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ನಾನು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಮ್ಮ ಜತೆ ಇರುತ್ತೇವೆ ಎಂದು ತಿಳಿಸಿದ್ದಾರೆ.
