ನನ್ನದು ದತ್ತಾತ್ರೇಯ ಗೋತ್ರ, ಹಾಗೂ ನನ್ನ ಕುಟುಂಬ ಕಾಶ್ಮೀರಿ ಬ್ರಾಹ್ಮಣ : ರಾಹುಲ್​ ಗಾಂಧಿ

Featured, ರಾಷ್ಟ್ರ ನ್ಯೂಸ್

ಜೈಪುರ: ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವ ರಾಜಸ್ಥಾನದ ಪ್ರಸಿದ್ಧ ಪುಷ್ಕರ್‌ ನಲ್ಲಿನ ಬ್ರಹ್ಮ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತನ್ನದು ದತ್ತಾತ್ರೇಯ ಗೋತ್ರವೆಂದೂ ತಾನು ಕೌಲ ಬ್ರಾಹ್ಮಣ ನೆಂದೂ ಬಹಿರಂಗಪಡಿಸಿದರು.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಗೋತ್ರ ಯಾವುದು ಎಂಬ ಬಿಜೆಪಿ ಪ್ರಶ್ನೆಗೆ ಸ್ವತಃ ​ರಾಹುಲ್​ ಗಾಂಧಿ ಅವರೇ ಉತ್ತರಿಸಿದ್ದಾರೆ. ರಾಜಸ್ಥಾನದ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ರಾಹುಲ್​ ಭೇಟಿ ನೀಡಿದ್ದ ವೇಳೆ ಅಲ್ಲಿನ ಅರ್ಚಕರಿಗೆ ತಮ್ಮ ಕುಲ ಗೋತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ..

ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಾನು ಕೌಲ ಬ್ರಾಹ್ಮಣಕ್ಕೆ ಸೇರಿದವನೆಂದೂ ರಾಹುಲ್ ಗಾಂಧಿ​ ಹೇಳಿಕೊಂಡಿದ್ದಾರೆ. ಪೂಜೆಯ ಬಳಿಕ, ಈ ಬಗ್ಗೆ ಮಾತನಾಡಿರುವ ಬ್ರಹ್ಮ ದೇವಾಲಯದ ಅರ್ಚಕರು ರಾಹುಲ್​ ಗಾಂಧಿ ಅವರು ತಮ್ಮದು ದತ್ತಾತ್ರೇಯ ಗೋತ್ರ, ತಮ್ಮ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದೆಂದು ಹೇಳಿರುವುದಾಗಿ ತಿಳಿಸಿದರು.

ಕೌಲ್ ಎಂಬುದು ಸಂಸ್ಕೃತದ ಕುಲ್​ ಪದವಾಗಿದ್ದು, ಕಾಶ್ಮೀರಿ ಪಂಡಿತರು ಬಳಸುವ ಉಪನಾಮವಾಗಿದೆ. ಮೋತಿಲಾಲ್ ನೆಹರು, ಜವಹಾರಲಾಲ್ ನೆಹರು, ರಾಜೀವ್​ ಗಾಂಧಿ, ರಾಹುಲ್​ ಗಾಂಧಿ ಇವರೆಲ್ಲ ಅಲಹಾಬಾದ್ ನಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರು ಎಂದು ಅರ್ಚಕರು ಹೇಳಿದ್ದಾರೆ.

ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಮ್ಮ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದೆಂದು ರಾಹುಲ್ ಗಾಂಧಿ​ ಹೇಳಿದ್ದಾರೆ ಎಂದು ಪೂಜೆಯ ಬಳಿಕ ಬ್ರಹ್ಮ ದೇವಾಲಯದ ಅರ್ಚಕರು ತಿಳಿಸಿದ್ದಾರೆ.