ನನ್ನನ್ನು ರಾಜಕೀಯವಾಗಿ ಮುಗಿಸಿದ್ರೆ, ಇಡೀ ಕಾಂಗ್ರೆಸ್ ಮುಗಿಸಿದಂಗಾಗುತ್ತೆ ಅಂತಾ ಟಾರ್ಗೆಟ್ ಮಾಡ್ತಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ – vishwanews24

Featured, ರಾಜ್ಯ ನ್ಯೂಸ್

ನಾನು ಯಾವುದೇ ತಪ್ಪು ಮಾಡಿಲ್ಲ , ರಾಜಕೀಯ ದುರುದ್ದೇಶದಿಂದ ಇದನೆಲ್ಲ ಮಾಡ್ತಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ಮುಂದೆ ಮಾಡುವುದಿಲ್ಲ. ರಾಜಕೀಯ ದುರುದ್ದೇಶದಿಂದ ಇದನೆಲ್ಲ ಮಾಡ್ತಿದ್ದಾರೆ. ರಾಜಕೀಯವಾಗಿ ನಾವು ಎದುರಿಸುತ್ತೇವೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ರೆ, ಇಡೀ ಕಾಂಗ್ರೆಸ್ ಮುಗಿಸಿದಂಗಾಗುತ್ತೆ ಅಂತಾ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​​ ನೀಡುತ್ತಿದ್ದಂತೆ ಬಿಜೆಪಿ ಸಿಎಂ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಿದ್ರೆ, ಇಡೀ ಕಾಂಗ್ರೆಸ್ ಮುಗಿಸಿದಂಗಾಗುತ್ತೆ ಅಂತಾ ಟಾರ್ಗೆಟ್ ಮಾಡ್ತಿದ್ದಾರೆ ಎಂದು ತಿಳಿಸಿದರು. ಇನ್ನು ಇದದೇ ವೇಳೆ ಮಾನಸಿಕವಾಗಿ ನೀವು ಡಲ್​ ಆಗಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಡಲ್​ ಆಗಿಲ್ಲ, ಇನ್ನೂ ಸ್ಟ್ರಾಂಗ್ ಆಗಿದ್ದೇನೆ ಎಂದರು.

ಮಂಗಳೂರು : ರಾಜ್ಯಪಾಲರ ವಿರುದ್ಧದ ಕಾಂಗ್ರೆಸ್ ಕಾರ್ಯಕರ್ತರ ಉಗ್ರ ಪ್ರತಿಭಟನೆ ; ಬಸ್‌ಗೆ ಕಲ್ಲು ತೂರಾಟ, ಟೈರಿಗೆ ಬೆಂಕಿ.. vishwanews24

Leave a Reply