ನಮ್ಮ ಕುಟುಂಬದ ಹೆಣನೂ ಬಿಜೆಪಿ ಕಡೆ ಹೋಗಲ್ಲ : ಪ್ರಿಯಾಂಕ್ ಖರ್ಗೆ – Vishwanews24
ನಮ್ಮ ಕುಟುಂಬದ ಹೆಣನೂ ಬಿಜೆಪಿ ಕಡೆ ಹೋಗಲ್ಲ , ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ : ಪ್ರಿಯಾಂಕ್ ಖರ್ಗೆ
ವಿಧಾನಸಭೆ,: ನಮ್ಮ ಕುಟುಂಬದ ಹೆಣ ಕೂಡ ಬಿಜೆಪಿ ಕಡೆ ಹೋಗಲ್ಲ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲವು ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಬಿಜೆಪಿ ಬರುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ನಮ್ಮ ಕುಟುಂಬದ ಹೆಣನೂ ಹೋಗಲ್ಲ. ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ. ನಮ್ಮ ರಕ್ತದಲ್ಲಿ ಆರ್‌ಎಸ್‌ಎಸ್ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಉಡುಪಿ ಕೂರ್ಮ ಫೌಂಡೇಶನ್ ವತಿಯಿಂದ ಫೆ.24ರಂದು ಆಜಾದ್ ಹಿಂದ್ ವಿಶೇಷ ಕಾರ್ಯಕ್ರಮ – Vishwanews24
ಇನ್ನು ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ? ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ? ಎಂದು ಪ್ರಶ್ನಿಸಿದ್ದಾರೆ.
