“ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನ” ಕ್ಕೆ ಚಾಲನೆ – Vishwanews24

Featured, ದಕ್ಷಿಣ ಕನ್ನಡ

“ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನ” ಕ್ಕೆ ಚಾಲನೆ

ತುಳು ಬಾಷೆಗೆ ಮಾನ್ಯತೆ ಸಿಗಬೇಕು ಮತ್ತು ತುಳು ಭಾಷೆಯನ್ನು ೮ ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ತುಳುವರ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ತಿಳಿಸುವ ವಿಭಿನ್ನ ಯೋಜನೆಯನ್ನು ತುಳುವೆರೆ ಕುಡ್ಲ (ರಿ) ತುಳು ಸಂಘಟನೆ ,ತುಳುನಾಡು ವಾರ್ತೆ ವಾರ ಪತ್ರಿಕೆ ಮತ್ತು ನಮ್ಮ ಟಿ.ವಿ ಸಹಯೋಗದಲ್ಲಿ ದಿ..01/09/2022 ನೇ ಗುರುವಾರ ತುಳುನಾಡಿನ ತುತ್ತ ತುದಿಯಾದ ಬೆಳ್ತಂಗಡಿ ತಾಲೂಕಿನ “ಬಂಜಾರು ಮಲೆ” ಎಂಬ ಪ್ರದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಈ ಅಭಿಯಾನವು ೧ ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್ ತುಳುನಾಡಿನ ಜನತೆಯಿಂದ ಬರೆಯಿಸಿ ಕಳುಹಿಸುವ ಗುರಿಯನ್ನು ಹೊಂದಿದ್ದು. ಈಗಾಗಲೇ ಅಭಯಾನಕ್ಕೆ ಹಲವು ಸಂಘಟನೆಗಳ ಬೆಂಬಲ ದೊರೆತಿದೆ. ಅಭಿಯಾನದ ಆಯೋಜಕರುಗಳು ತುಳುನಾಡಿನ ಎಲ್ಲಾ ರಾಜಕೀಯ, ಧಾರ್ಮಿಕ ಮತ್ತು ಎಲ್ಲಾ ಸಂಘಟನೆಗಳಿಗೆ ಈ ಅಭಿಯಾನದಲ್ಲಿ ನಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 9845858594 ಮೊಬೈಲ್ ನಂಬರನ್ನು ಸಂಪರ್ಕಿಸಿ.

ಮಂಗಳೂರು : ತುಳು ಮಾನ್ಯತೆಗಾಗಿ ‘ನಮ್ಮ ಪ್ರಧಾನಿಗೆ ತುಳುವೆರೆ ಪೋಸ್ಟ್ ಕಾರ್ಡ್’ ಅಭಿಯಾನ – Vishwanews24

Leave a Reply