ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ :ಎಸ್.ಎಂ ಕೃಷ್ಣ – Vishwanews24
ಬೆಂಗಳೂರು,: ನಾನು ಕಂಡಂತೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಂತರ ಉತ್ತಮ, ಮೋಸ್ಟ್ ಹಾರ್ಡ್ ವರ್ಕಿಂಗ್ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ, ಅವರು ಪ್ರಧಾನಿಯಾಗುವುದು ನಿಶ್ಚಿತ. ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಾಕಷ್ಟು ಪ್ರಬುದ್ಧ ಅನುಭವಿ ನಾಯಕರಿದ್ದಾರೆ. ಆದರೆ, ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಸರಿಯಾದ ಸಲಹೆ ಕೊಡುತ್ತಿಲ್ಲ ಎನಿಸುತ್ತದೆ. ನಾನಂತೂ ಕಾಂಗ್ರೆಸ್ ಬಿಟ್ಟ ಕ್ಷಣದಿಂದಲೇ ಆ ಪಕ್ಷದ ಬಗ್ಗೆ ಚಿಂತೆ ನಡೆಸುವುದನ್ನು ಬಿಟ್ಟಿದ್ದೇನೆ ಎಂದು ತಿಳಿಸಿದರು.
ಸಾಕಷ್ಟೂ ಹವ್ಯಾಸಿ ಪ್ರಿಯ ಪ್ರಧಾನಿಗಳು ಇರುತ್ತಾರೆ. ಆದರೆ, ನರೇಂದ್ರ ಮೋದಿಗೆ ಯಾವ ಹವ್ಯಾಸಗಳೂ ಇಲ್ಲ. ಹೋಗಲಿ ಮಕ್ಕಳು, ಮೊಮ್ಮಕ್ಕಳು ಎನ್ನುವ ಚಿಂತೆಯೂ ಇಲ್ಲ. ಒಬ್ಬ ಸೋದರ ಇದ್ದಾರೆ. ಆದರೆ, ನಗಣ್ಯ. ಹಾಗಾಗಿ ನರೇಂದ್ರ ಮೋದಿ ನಿರಾಳವಾಗಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಬಾಹುಬಲದಿಂದ ನರೇಂದ್ರ ಮೋದಿ ಪ್ರದಾನಿಯಾಗದಂತೆ ತಡೆಯುತ್ತಾರೆ, ಅದಕ್ಕೆ ಅಡ್ಡಿ ಮಾಡುತ್ತಾರೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತ. ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.
