ನವಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ : ಪ್ರಧಾನಿ ಮೋದಿ -Vishwanews24
ಹೊಸ ದಿಲ್ಲಿ: ನವಭಾರತದ ಯುವಕರಿಗೆ ಸರ್ ನೇಮ್(ಉಪನಾಮ) ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯುವಕರು ತಮ್ಮ ಸ್ವಸಾಮರ್ಥ್ಯದಿಂದಲೇ ಹೆಸರುವಾಸಿಯಾಗ್ತಾರೆ ಎಂದು ಮನೋರಮಾ ನ್ಯೂಸ್ ಕಾನ್ ಕ್ಲೇವ್ ನ ವೀಡಿಯೋ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನವಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ ಎಂದಿದ್ದಾರೆ.
ನವಭಾರತ ಇಂದು ಸ್ವಹಿತಾಸಕ್ತಿಯನ್ನು ಮರೆದು, ಸಮಾಜದ ಹಿತ ಚಿಂತನೆ ನಡೆಸ್ತಿದೆ, ಸರ್ಕಾರ ನೀಡುತ್ತಿರುವ ಸಬ್ಸಿಡಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡ್ತಿದ್ದಾರೆ, ಶತಮಾನಗಳ ಇತಿಹಾಸವಿರುವ ಗಾಂಧಿವಾದವನ್ನು ಪಾಲಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ನವಭಾರತದ ಪರಿಕಲ್ಪನೆ ಕೆಲವೇ ಕೆಲವು ಮಂದಿಗೆ ಮಾತ್ರ ಎಂದು ಭಾವಿಸಬೇಕಿಲ್ಲ, ಇದು ದೇಶದ 130 ಕೋಟಿ ಜನರ ದನಿ ಎಂದು ಪ್ರಧಾನಿ ಹೇಳಿದ್ದಾರೆ. ಸ್ವಚ್ಛಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಿಯೇ ತೀರುತ್ತೇವೆ, ದೇಶವನ್ನು ಭ್ರಷ್ಟಾಚಾರದಿಂದಲೂ ಮುಕ್ತಗೊಳಿಸ್ತೇವೆ, ಇದಕ್ಕಾಗಿ ನಮಗೆ ಇಚ್ಛಾಶಕ್ತಿ ಇದೆ ಎಂದು ಮೋದಿ ಹೇಳಿದ್ದಾರೆ.
ಭಾರತದಲ್ಲಿನ ಭಾಷಾ ವೈವಿಧ್ಯತೆ ಹಾಗೂ ಸಾಮರಸ್ಯದ ಬಗ್ಗೆ ಮಾತನಾಡಿದ ಮೋದಿ, ಕನ್ನಡಿಗರ ಒಂದು ಗುಂಪು ಬೆಂಗಾಲಿ ಭಾಷೆ ಕಲಿತರೆ, ಹರ್ಯಾಣದ ಒಂದಷ್ಟು ಜನ ಮಲೆಯಾಳಂ ಕಲಿತರೆ ಪರಸ್ಪರ ಹತ್ತಿರವಾಗಬಹುದು ಎಂದರು.
