ನವಿಮುಂಬಯಿ: ಉಡುಪಿ ಪುತ್ತಿಗೆ ಶ್ರೀಪಾದರಿಂದ ಚಾತುರ್ಮಾಸ ವ್ರತ ಸ್ವೀಕಾರ – vishwanews24

Featured, ಉಡುಪಿ

ನವಿಮುಂಬಯಿ: ಉಡುಪಿ ಪುತ್ತಿಗೆ ಶ್ರೀಪಾದರಿಂದ ಚಾತುರ್ಮಾಸ ವ್ರತ ಸ್ವೀಕಾರ

ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬುಧವಾರ ನವಿಮುಂಬಯಿಯ ಶ್ರೀ ಪುತ್ತಿಗೆ ಶಾಖಾ ಮಠದಲ್ಲಿ ತಮ್ಮ 53ನೇ ಚಾತುರ್ಮಾಸ ವ್ರತವನ್ನು ಸ್ವೀಕರಿಸಿದರು.

ಶ್ರೀಪಾದರು ಅನುಗ್ರಹಿಸಿ, ಭಕ್ತರ ಅಪೇಕ್ಷೆಯಂತೆ ಚಾತುರ್ಮಾಸ ವ್ರತವನ್ನು ನವಿಮುಂಬಯಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಶ್ರೀ ಪುತ್ತಿಗೆ ಶಾಖಾ ಮಠದಲ್ಲಿ ಕೈಗೊಳ್ಳುತ್ತಿದ್ದೇವೆ. ಈ ಭಾಗದ ಭಕ್ತರಿಗೆ ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ದೊರೆಯ ಬೇಕೆಂಬುದು ಬಹುಕಾಲದ ಅಪೇಕ್ಷೆಯಾಗಿತ್ತು. ಇದು ಈ ಮಠದಲ್ಲಿನ ಪ್ರಥಮ ಚಾತುರ್ಮಾಸ್ಯ, ನಿತ್ಯ ಪೂಜೆ, ಪಾಠ ಪ್ರವಚನ, ಭಜನೆ, ಅನ್ನದಾನ ಮೊದಲಾದ ಎಲ್ಲ ಕಾರ್ಯಕ್ರಮಗಳಿಗೂ ಭಕ್ತರು ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ. ಎಂದು ಹೇಳಿದರು ಅಪಾರ ಸಂಖ್ಯೆಯ ಭಕ್ತರು ಶ್ರೀಪಾದರ ಆಶೀರ್ವಾದ ಪಡೆದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಣಿಪಾಲದಲ್ಲಿ ಬೃಹತ್‌ ತಿರಂಗ ಯಾತ್ರೆ – vishwanews24

Leave a Reply