ನವೀನ್ ನ ಮೃತದೇಹ ಶವಾಗಾರಲ್ಲಿ ಇರಿಸಲಾಗಿದ್ದು ಯುದ್ಧನಿಂತ ಬಳಿಕ ತರುವ ಪ್ರಯತ್ನ ಮಾಡಲಾಗುವುದು : ಎಂ ಬೊಮ್ಮಾಯಿ – Vishwanews24
ನವೀನ್ ನ ಮೃತದೇಹವನ್ನು ಶವಾಗಾರಲ್ಲಿ ಇರಿಸಲಾಗಿದ್ದು ಯುದ್ಧನಿಂತ ಬಳಿಕ ತರುವ ಪ್ರಯತ್ನ ಮಾಡಲಾಗುವುದು : ಎಂ ಬೊಮ್ಮಾಯಿ – Vishwanews24
ಬೆಂಗಳೂರು: ಯುದ್ದಗ್ರಸ್ಥ ಉಕ್ರೇನ್ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಸವನ್ನಪ್ಪಿರುವ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ನ ಮೃತದೇಹವನ್ನು ಶವಾಗಾರಲ್ಲಿ ಇರಿಸಲಾಗಿದ್ದು, ಯುದ್ಧನಿಂತ ಬಳಿಕ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ, ನವೀನ್ ಮೃತದೇಹವನ್ನು ತರಲು ನಮ್ಮ ಸರ್ಕಾರ ಎಲ್ಲಾ ರೀತಿಯಿಂದಲೂ ಪ್ರಯತ್ನ ಮಾಡುತ್ತಿದ್ದು, ಸಂಬಂಧಪಟ್ಟ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವರು ಹೇಳಿದ್ದಾರೆ ಎಂದರು.
ಇನ್ನು ಉಕ್ರೇನ್ನ ಕೆಲವು ಪ್ರಮುಖ ನಗರಗಳಲ್ಲಿ ಈಗಲೂ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಅಲ್ಲಿ ನಿರಂತರವಾಗಿ ಬಾಂಬ್ ದಾಳಿ, ಶೆಲ್ ದಾಳಿ, ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಸಮಯ ಮತ್ತು ಪರಿಸ್ಥಿತಿ ನೋಡಿಕೊಂಡು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಉಳ್ಳಾಲ: ಪುತ್ರಿಯ ಅದ್ದೂರಿ ಹುಟ್ಟುಹಬ್ಬ ಆಚರಿಸಬೇಕಿದ್ದ ತಂದೆ ನೇಣಿಗೆ ಶರಣು – Vishwanews24
