ನವೋದಯ’ ಆ್ಯಪ್ ಮತ್ತು ತಂತ್ರಾಂಶದ ಮೂಲಕ ಮನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ-Vishwanews24
ನವೋದಯ’ ಆ್ಯಪ್ ಮತ್ತು ತಂತ್ರಾಂಶದ ಮೂಲಕ ಮನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ-Vishwanews24
ಬೆಂಗಳೂರು: ‘ಮನೆ ಬಾಗಿಲಿಗೇ ಮಾಸಾಶನ’ ಅಭಿಯಾನದ ಮೂಲಕ ಫಲಾನುಭವಿಗಳ ಮನೆಗೆ ಪಿಂಚಣಿ ತಲುಪಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅರ್ಹ ಫಲಾನುಭವಿಗಳನ್ನು ‘ನವೋದಯ’ ಆ್ಯಪ್ ಮತ್ತು ತಂತ್ರಾಂಶದಲ್ಲಿ ಗುರುತಿಸಿ, ಅವರ ಮನೆ ಬಾಗಿಲಲ್ಲೇ ಪಿಂಚಣಿ ಮಂಜೂರಾತಿ ಮಾಡುವ ಅಭಿಯಾನಕ್ಕೆ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಕೂಡ. ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ತುಂಬಾ ಕಷ್ಟ ಪಡುತ್ತಿದ್ದರು. ಇದೀಗ ಅದನ್ನು ತಪ್ಪಿಸಲು ಸರ್ಕಾರ ಮಹತ್ವದ ಯೋಜನೆ ಜಾರಿ ಮಾಡಿದೆ’ ಎಂದರು.
‘ಪಿಂಚಣಿಗಾಗಿ ಜನರು ಸರ್ಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳ ಬಳಿ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಅದೆಲ್ಲವನ್ನೂ ತಪ್ಪಿಸಲುಈ ಯೋಜನೆ ಸಹಕಾರಿಯಾಗಲಿದೆ. ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪಲಿದೆ’ ಎಂದರು.
‘ಮೊದಲ ಹಂತದಲ್ಲಿ ವೃದ್ಧಾಪ್ಯ ವರ್ಗಕ್ಕೆ ಯೋಜನೆ ಜಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ವಿಧವೆಯರು, ಅಂಗವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಜಾರಿ ಮಾಡಲು ಕ್ರಮ ವಹಿಸುತ್ತೇವೆ’ ಎಂದರು.
ನಿಜವಾದ ರೈತರು ಹಿಂಸಾಚಾರ ನಡೆಸಲು ಸಾಧ್ಯವಿಲ್ಲ : ಶೋಭಾ ಕರಂದ್ಲಾಜೆ -Vishwanews24
