ನಾಥೂರಾಮ್ ಗೋಡ್ಸೆ ಹಾಗೂ ಮೋದಿ ಅವರದ್ದು ಒಂದೇ ಸಿದ್ಧಾಂತ : ರಾಹುಲ್ ಕಿಡಿ -Vishwanews24
ವಯನಾಡ್: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಒಂದೇ ಸಿದ್ಧಾಂತವನ್ನು ನಂಬಿದವರು. ವ್ಯತ್ಯಾಸವೆಂದರೆ ತಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳಲು ನರೇಂದ್ರ ಮೋದಿಗೆ ಧೈರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.
“ನಾಥುರಾಮ್ ಗೋಡ್ಸೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ, ಆತನಿಗೆ ಯಾರ ಬಗ್ಗೆಯೂ ಕಾಳಜಿ ಇರಲಿಲ್ಲ, ತನ್ನನ್ನೇ ತಾನು ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆತ ಮಹಾತ್ಮ ಗಾಂಧಿಯನ್ನು ಕೊಂದ. ಇದೇ ರೀತಿ ನಮ್ಮ ಪ್ರಧಾನಿ ಕೂಡ; ಅವರನ್ನು ಮಾತ್ರ ಪ್ರೀತಿಸುತ್ತಾರೆ, ಅವರನ್ನು ಮಾತ್ರ ನಂಬುತ್ತಾರೆ,” ಎಂದು ದೂರಿದರು.
“ನೀವು ಗಮನಿಸಿ, ನರೇಂದ್ರ ಮೋದಿಗೆ ನಿರುದ್ಯೋಗ ಮತ್ತು ಉದ್ಯೋಗದ ಬಗ್ಗೆ ಏನೇ ಪ್ರಶ್ನೆಗಳನ್ನು ಕೇಳಿ ಅವರು ತಕ್ಷಣ ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಎನ್ಆರ್ಸಿ ಮತ್ತು ಸಿಎಎಯಿಂದ ಉದ್ಯೋಗ ಸಿಗುವುದಿಲ್ಲ. ಕಾಶ್ಮೀರದ ಪರಿಸ್ಥಿತಿ ಮತ್ತು ಹೊತ್ತಿ ಉರಿಯುತ್ತಿರುವ ಅಸ್ಸಾಂನಿಂದ ನಮ್ಮ ಯುವ ಜನರಿಗೆ ಉದ್ಯೋಗ ಸಿಗಲಾರದು,” ಎಂದು ಅವರು ವಿವಿರಿಸಿದರು.
ರಾಹುಲ್ ಗಾಂಧಿ ಅವರ ಸ್ವಕ್ಷೇತ್ರವೂ ಆಗಿರುವ ವಯನಾಡ್ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
