ನಾನು ಈ ಬಾರಿ ಗೆಲ್ಲಲು ಬಂದಿದ್ದೇನೆ : ಮಧು ಬಂಗಾರಪ್ಪ – Vishwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ : ಕಳೆದ ಬಾರಿ ಲೋಕಸಭಾ ಉಪ ಚುನಾವಣೆಯಲ್ಲಿ  ಇಷ್ಟವಿಲ್ಲದಿದ್ದರೂ ಹಿರಿಯರ ವಿಶ್ವಾಸಕ್ಕೆ ತಲೆಬಾಗಿದ್ದೆ. ಈ ಬಾರಿ ನಾನು ಸೋಲೋಕೆ ಬಂದಿಲ್ಲ. ಈ ಬಾರಿ ಗೆಲ್ಲಲು ಬಂದಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ( ಉಪ ಚುನಾವಣೆ) ಎಲ್ಲೆಲ್ಲಿ ತಪ್ಪಾಗಿದಿಯೋ ಅವೆಲ್ಲಾ ಸರಿಪಡಿಸಿಕೊಳ್ಳುತ್ತೇನೆ. ಈ ಬಾರಿ ದಡ ಸೇರುತ್ತೆನೆ ಎಂಬ ವಿಶ್ವಾಸವಿದೆ. ಈ ಬಾರಿಯೂ ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ನಿನ್ನೆ ಈ ಸಂಬಂಧ ಬೆಂಗಳೂರಿನಲ್ಲಿ ಚರ್ಚೆ ನಡೆದಿದೆ. ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಾನು ಸೋತಿರಬಹುದು, ಆದರೆ, ಜನರ ಪರವಾದ ಹೋರಾಟವನ್ನು ಬಿಡುವುದಿಲ್ಲ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಮತಗಳಿವೆ ಹಾಗಾಗಿ, ಅವರಲ್ಲಿ ಕೆಲವರು ತಮ್ಮ ಪಕ್ಷದವರಿಗೆ ಟಿಕೆಟ್ ನೀಡಿ ಎಂದು ಹೇಳುತ್ತಿರಬಹುದು. ಆದರೆ, ಎಲ್ಲರೂ ಒಪ್ಪಿ ತಮ್ಮನ್ನು ಬೆಂಬಲಿಸಿ ಜಯ ತಂದು ಕೊಡುವ ವಿಶ್ವಾಸವಿದೆ ಎಂದರು.

ಲೋಕಸಭೆ ಉಪ ಚುನಾವಣೆಯಲ್ಲಿ ಸೋಲುಂಟಾದ ಬಳಿಕ ಮಧು ಬಂಗಾರಪ್ಪ ಅವರು ರಾಜಕಾರಣದಿಂದಲೇ ದೂರು ಉಳಿದಿದ್ದರು. ಪಕ್ಷದ ಯಾವ ಕಾರ್ಯಕ್ರಮವಕ್ಕೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಿಲ್ಲ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಹಿಡಿದು ಅನೇಕ ಪ್ರಮುಖ ಮುಖಂಡರು ಮಧು ಬಂಗಾರಪ್ಪ ಅವರ ಮನವೊಲಿಸಲು ಯತ್ನಿಸಿದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಇದೀಗ ಮಧು ಬಂಗಾರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವುದು ಗಮನಾರ್ಹ.