ನಾನು ಜೀವಂತ ಇಲ್ಲ, ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ : ರಮೇಶ್ ಕುಮಾರ್  – VIshwanews24

Featured, ರಾಜ್ಯ ನ್ಯೂಸ್

ನಾನು ಜೀವಂತ ಇಲ್ಲ, ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ : ರಮೇಶ್ ಕುಮಾರ್  – VIshwanews24

ಬೆಳಗಾವಿ: ಜೀವಂತ ಇರೋರನ್ನು ಮಾತಾಡಿಸಿ, ನಾನು ಜೀವಂತ ಇಲ್ಲ. ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ರಮೇಶ್ ಕುಮಾರ್ ಅವರಿಗೆ ಮಾಧ್ಯಮಗಳ ಮೇಲೆ ಇನ್ನೂ ಕೋಪ ತಣ್ಣಗಾದಂತಿಲ್ಲ. ಎಂಇಎಸ್ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ಕೊಡಲು ರಮೇಶ್ ಕುಮಾರ್ ನಕಾರ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಬಂದು ಕೈ ಮುಗಿದು ಜೀವಂತ ಇರೋರನ್ನು ಮಾತಾಡಿಸಿ, ನಾನು ಜೀವಂತ ಇಲ್ಲ, ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ ಎಂದು ಹೇಳುತ್ತಾ ಹೊರಟಿದ್ದಾರೆ.

ಅತ್ಯಾಚಾರದ ಕುರಿತು ರಮೇಶ್ ಕುಮಾರ್ ಅವರು ಬೆಳಗಾವಿ ವಿಧಾನಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿ ಎಡವಟ್ಟು ಮಾಡಿಕೊಂಡಿದ್ದರು. ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಕಿಡಿಕಾರಿದ್ದಾರೆ. ರಮೇಶ್ ಕುಮಾರ್ ಅವರು ಹೆಣ್ಣಿನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು.

ಅಯೋಧ್ಯೆ ಹಾಗೂ ಕಾಶಿ ನಂತರ ಮಥುರಾದಲ್ಲೂ ಕೃಷ್ಣನ ಭವ್ಯ ಮಂದಿರ ನಿರ್ಮಾಣ : ಹೇಮಾ ಮಾಲಿನಿ – Vishwanews24