ನಾನು ಪ್ರತಿಬಾರಿ ಕಣಕ್ಕಿಳಿದಾಗಲೆಲ್ಲಾ ಕೇವಲ ನನ್ನ ತಂಡಕ್ಕಾಗಿ ಮಾತ್ರವಲ್ಲದೆ ಇಡೀ ದೇಶಕ್ಕಾಗಿ ಮುನ್ನಡೆಯುತ್ತೇನೆ,” : ರೋಹಿತ್ ಶರ್ಮಾ -Vishwanews24
ನವದೆಹಲಿ: ಸ್ಟ್ ಇಂಡೀಸ್ ವಿರುದ್ಧದ ವಿವಿಧ ಮಾದರಿಯ ಕ್ರಿಕೆಟ್ ಸರಣಿಗಳ ಸಲುವಾಗಿ ಅಮೆರಿಕಕ್ಕೆ ಭಾರತ ತಂಡ ಪ್ರಯಾಣ ಬೆಳೆಸುವುದಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ತಮ್ಮ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಯಾವುದೇ ವೈಮನಸ್ಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.
ರೋಹಿತ್ ಶರ್ಮಾ ತಮ್ಮ ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಖಾತೆ ಮೂಲಕ ಫೋಟೊ ಒಂದನ್ನು ಶೇರ್ ಮಾಡಿದ್ದು, ಫೋಟೋಗೆ ‘ನಾನು ಪ್ರತಿಬಾರಿ ಕಣಕ್ಕಿಳಿದಾಗಲೆಲ್ಲಾ ಕೇವಲ ನನ್ನ ತಂಡಕ್ಕಾಗಿ ಮಾತ್ರ ನಾನು ಮುನ್ನುಗ್ಗುವುದಿಲ್ಲ. ಇಡೀ ದೇಶಕ್ಕಾಗಿ ಮುನ್ನಡೆಯುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಗೆ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಬ್ಯಾಟಿಂಗ್ ಆರಂಭಿಸಲು ಡ್ರೆಸಿಂಗ್ ರೂಮ್ ನಿಂದ ಮೈದಾನದ ಕಡೆಗೆ ಬರುತ್ತಿರುವ ಫೋಟೊ ಅಪ್ಲೋಡ್ ಮಾಡಿದ್ದಾರೆ.
I don’t just walk out for my Team. I walk out for my country. pic.twitter.com/S4RFkC0pSk
— Rohit Sharma (@ImRo45) July 31, 2019
