ನಾನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಆಕಾಂಕ್ಷಿಯಲ್ಲ : ಸುನಿಲ್ ಕುಮಾರ್  – vishwanews24

Featured, ರಾಜ್ಯ ನ್ಯೂಸ್

ಯಾವುದೇ ಬಣ ರಾಜಕೀಯದಲ್ಲಿ ನಾನಿಲ್ಲ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ : ಸುನಿಲ್ ಕುಮಾರ್ 

ಬೆಂಗಳೂರು : ನಾನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಸುನಿಲ್ ಕುಮಾರ್ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಸಮಸ್ಯೆಗಳಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನಿಭಾಯಿಸಲಾಗದ ಕಾರಣ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಹಾಗಿರುವಾಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಲು ಸಾಧ್ಯವೇ ಎಂದರು.

ಇದೇ ಸಂದರ್ಭ ಬಿಜೆಪಿಯಲ್ಲಿ ಅಧ್ಯಕ್ಷನ ಆಯ್ಕೆಗೆ ಚುನಾವಣೆ ನಡೆಯಲ್ಲ ಅದೊಂದು ಔಪಚಾರಿಕತೆ. ಸರ್ವಾನುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ಬಣ ರಾಜಕೀಯದಲ್ಲಿ ನಾನಿಲ್ಲ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ಪ್ರಯಾಗರಾಜ್ ಮಹಾಕುಂಭ ಮೇಳ : ಪವಿತ್ರ ಪುಣ್ಯ ಸ್ನಾನ ನೆರವೇರಿಸಿದ ಸುಧಾ ಮೂರ್ತಿ – vishwanews24

Leave a Reply