ನಾನು ಭವಿಷ್ಯ ಹೇಳುತ್ತೇನೆ , ಮುಂದಿನ 15 ವರ್ಷಗಳವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುತ್ತದೆ : ಪ್ರೀತಂ ಗೌಡ -Vishwanews24
ಹಾಸನ : ಮುಂದಿನ 15 ವರ್ಷಗಳವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುತ್ತದೆ ಎಂದು ಹೇಳುವ ಮೂಲಕ ಕೋಡಿ ಶ್ರೀಗಳಿಗೆ ಶಾಸಕ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ಭವಿಷ್ಯ ಹೇಳುತ್ತೇನೆ. ಈ ಹಿಂದೆ ನಾನು ಹೇಳಿದ ಭವಿಷ್ಯ ನಿಜವಾಗಿದೆ. ಮುಂದೆಯೂ ನಮ್ಮ ಬಿಜೆಪಿ ಸರ್ಕಾರ ಬರುತ್ತದೆ ಎಂದು ಹೇಳುತ್ತಿದ್ದೇನೆ. ಈಗ ಸರ್ಕಾರ ಪತನದ ಭವಿಷ್ಯ ಹೇಳಿರೋ ಸ್ವಾಮೀಜಿ ಹಿಂದಿನ ವಿಚಾರಗಳನ್ನು ನೋಡಿ, ಅವರದ್ದು ಗಾಳಿ ಬಂದಕಡೆ ತೂರಿಕೊಳ್ಳುವ ಗುಣವಾಗಿದೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕಿಡಿಕಾರಿದರು.
ರಾಜಕೀಯ ವಿಷಯದಲ್ಲಿ ಮೀಡಿಯಾ ಅಟ್ರಾಕ್ಷನ್ ಗೆ ಬಾಯಿಗೆ ಬಂದಹಾಗೆ ಮಾತಾಡೋದು ಬೇಡ. ಅವರು ಹಿರಿಯರು ಪಾದಕ್ಕೆ ನಮಸ್ಕಾರ ಮಾಡಿ ಹೇಳುತ್ತೇನೆ. ನೀವು ರಾಜಕಾರಣದ ಬಗ್ಗೆ ಸ್ವಲ್ಪ ದಿನ ಭವಿಷ್ಯ ಹೇಳುವುದನ್ನು ಕಡಿಮೆ ಮಾಡಿದರೆ ಸಾರ್ವಜನಿಕ ಹಿತದಿಂದ ಒಳ್ಳೆಯದು ಎಂದು ಹೇಳಿದರು.
