ನಾನು ಮನಸ್ಸು ಮಾಡಿದರೆ ಯಾವತ್ತಾದ್ರೂ ಒಂದು ದಿನ ಮುಖ್ಯಮಂತ್ರಿ ಆಗುವೆ : ಜನಾರ್ದನ ರೆಡ್ಡಿ – Vishwanews24
ನಾನು ಮನಸ್ಸು ಮಾಡಿದರೆ ಯಾವತ್ತಾದ್ರೂ ಒಂದು ದಿನ ಮುಖ್ಯಮಂತ್ರಿ ಆಗುವೆ : ಜನಾರ್ದನ ರೆಡ್ಡಿ – Vishwanews24
ಬಳ್ಳಾರಿಯಲ್ಲಿ ಮಂಗಳವಾರ ರಾತ್ರಿ ನಡೆದ ಶಾಸಕ ಸೋಮಶೇಖರ ರೆಡ್ಡಿ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿರುವ ಜರ್ನಾದನ ರೆಡ್ಡಿ, ನನಗೆ ಶಾಸಕ ಆಗಬೇಕು, ಮಂತ್ರಿ ಆಗಬೇಕು ಅಂತಾ ಆಸೆಯಿಲ್ಲ. ಒಂದು ವೇಳೆ ನಾನು ಮನಸ್ಸು ಮಾಡಿದರೆ ಯಾವತ್ತಾದರೂ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ.
ರೆಡ್ಡಿ, ರಾಮುಲು ಸಹೋದರರಿಗೆ ಇಂದು ದುಡ್ಡಿನ ಅವಶ್ಯಕತೆ ಇಲ್ಲ ಎಂದಿರುವ ಜನಾರ್ದನ ರೆಡ್ಡಿ, ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು. ನನಗಂತೂ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ, ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕ ದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ ಎಂದು ಹೇಳಿದರು.
ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ ಎಂದು ಹೇಳಿದ ಜನಾರ್ದನ ರೆಡ್ಡಿ, ಅಷ್ಟು ತೊಂದರೆ ನನಗೆ ನೀಡಿದರು. ನನ್ನ ಬಂಧನ ಮಾಡಲು ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದ್ರು. ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ, ಆದರೆ ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಿಬಿಐನವರು ಹೇಳಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕಾರ್ಕಳ : ಕಿರುಸೇತುವೆ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ – Vishwanews24
