ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ : ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ; ಧರ್ಮ ರಾಜಕಾರಣ ಮಾಡುವುದು ಸರಿಯಲ್ಲ : ಸಿದ್ದರಾಮಯ್ಯ

ಬೆಂಗಳೂರು: ನಾನು ಹಿಂದೂ ವಿರೋಧಿಯಲ್ಲ. ಹಿಂದುತ್ವದ ವಿರೋಧಿ. ಧರ್ಮ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ನಮ್ಮ ವಿರೋಧ ಖಂಡಿತಾ ಇಲ್ಲ. ಆದರೆ ಬಿಜೆಪಿಯವರು ಇದೇ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಧರ್ಮ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಖ್ಯಾತ ಕಲಾನಿರ್ದೇಶಕ ಸುನಿಲ್ ಬಾಬು  ಹೃದಯಾಘಾತದಿಂದ ನಿಧನ  – Vishwanews24

ಸಮಾಜದಲ್ಲಿ ಎಲ್ಲಾ ಧರ್ಮಗಳೂ ಸಮಾನವಾಗಿವೆ. ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಎತ್ತಿಕಟ್ಟುವುದು ಸರಿಯಲ್ಲ. ಧರ್ಮ, ಜಾತಿಗಳನ್ನು ರಾಜಕೀಯವಾಗಿ ಬಳಸಿಕೊಂಡು ಮನಸುಗಳನ್ನು ಒಡೆಯುವುದು ತಪ್ಪು. ನಾನು ಹಿಂದುತ್ವದ ವಿರೋಧಿಯೇ ಹೊರತು ಹಿಂದೂ ವಿರೋಧಿಯಲ್ಲ ಎಂದವರು ಪ್ರತಿಪಾದಿಸಿದರು.

ರಾಮ, ಆಂಜನೇಯ ಮಂದಿರಗಳು ಪ್ರತೀ ಹಳ್ಳಿಗಳಲ್ಲಿವೆ. ನಾವೂ ಅವುಗಳ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದೇವೆ. ರಾಮಮಂದಿರ ನಿರ್ಮಾಣವಾದರೆ ಎಲ್ಲರಿಗೂ ಖುಷಿಯೇ. ಆದರೆ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ನಿಲುವಿಗೆ ನನ್ನ ವಿರೋಧವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕರಾವಳಿ ಬಿಜೆಪಿಯ ಬಹುತೇಕ ಖಚಿತಗೊಂಡ ಅಭ್ಯರ್ಥಿಗಳ ಪಟ್ಟಿ:ಲಾಲಾಜಿ-ರಘುಪತಿಭಟ್-ಸುಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಔಟ್-ಉಮನಾಥ್ , ವೇದವ್ಯಾಸ ಕಾಮತ್,ಹಾಲಾಡಿ ಡೌಟ್

Leave a Reply