ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತತ್ತರಿಸಿದ ಮುಂಬೈ -Vishwanews24
ಮುಂಬೈ:ವಾಣಿಜ್ಯ ನಗರಿ ಮುಂಬೈಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದ್ದು, ರೈಲ್ವೆ ಹಳಿಗಳು ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಅತಿಯಾದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು, ರೈಲ್ವೆ ಹಳಿಗಳು ಹಾಗೂ ಅನೇಕ ಮನೆಗಳು ಜಲಾವೃತಗೊಂಡಿವೆ. ನಗರದ ಡಾಡರ್ ಈಸ್ಟ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ ಮಕ್ಕಳು ನೀರಿನಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ
Mumbai: Railway tracks submerged between Sion railway station and Matunga railway station following heavy rainfall in parts of Maharashtra. pic.twitter.com/YMvZMGXQUR
— ANI (@ANI) July 1, 2019
ಬಾಂದ್ರಾ, ಪರೇಲ್ ಮತ್ತು ದಾದರ್ ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ನಸುಕಿನ ವೇಳೆ ಕನಿಷ್ಠ 100 ಮಿ.ಮೀಟರ್ ಮಳೆ ಸುರಿದಿದೆ. ರಾತ್ರಿಯಿಡೀ ಬರೋಬ್ಬರಿ 360 ಮಿಲಿ ಮೀಟರ್ ದಾಖಲೆಯ ಮಳೆ ಸುರಿದಿರುವುದಾಗಿ ವರದಿ ತಿಳಿಸಿದೆ.
