ನಾಳೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ ; ರಾಜ್ಯದ ಜೆಡಿಎಸ್, ಬಿಜೆಪಿ ನಾಯಕರು ಎಲ್ಲರೂ ಬರಬೇಕು: ಡಿಕೆ ಶಿ ಆಹ್ವಾನ – Vishwanews24
ನಾಳೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ ,ರಾಜ್ಯದ ಜೆಡಿಎಸ್, ಬಿಜೆಪಿ ನಾಯಕರು ಎಲ್ಲರೂ ಬರಬೇಕು: ಡಿಕೆ ಶಿವಕುಮಾರ್ ಆಹ್ವಾನ
ಬೆಂಗಳೂರು: ನಾಳೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರದ ಅನೇಕ ನಾಯಕರು ಬರ್ತಾರೆ. ನಾಳೆ ಕಾರ್ಯಕರ್ತರು ವಾಹನ ಮಾಡಿಕೊಂಡು ಬರಬೇಕು ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಾಳೆ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವುದರಿಂದ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಳೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಧ್ಯಮದ ಮೂಲಕವೇ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್, ಬೆಳಗ್ಗೆ 11 ಗಂಟೆ ಒಳಗೆ ಎಲ್ಲರೂ ಸ್ಟೇಡಿಯಂ ಒಳಗೆ ಬರಬೇಕು. ಇದು ಸರ್ಕಾರದ ಕಾರ್ಯಕ್ರಮ ಆಗಿರೋದ್ರಿಂದ ರಾಜ್ಯದ ಜೆಡಿಎಸ್, ಬಿಜೆಪಿ ನಾಯಕರು ಕೂಡ ಬರಬೇಕು ಅಂತ ಮುಖಂಡರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
