ನಾಳೆ ಕಾಪು ಹೊಸಮಾರಿಗುಡಿ ನೂತನ ದೇವಾಲಯ ನಿರ್ಮಾಣದ ಐತಿಹಾಸಿಕ ನಿಧಿ ಕುಂಭ ಸ್ಥಾಪನೆ.vishwanews24
ನಾಳೆ ಕಾಪು ಹೊಸಮಾರಿಗುಡಿ ನೂತನ ದೇವಾಲಯ ನಿರ್ಮಾಣದ ಐತಿಹಾಸಿಕ ನಿಧಿ ಕುಂಭ ಸ್ಥಾಪನೆ.
ಕಾಪು: ಐತಿಹಾಸಿಕ ಹಿನ್ನಲೆಯ ಕಾಪು ಶ್ರೀ ಹೊಸ ಮಾರಿಗುಡಿಯು ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, ಮಾರಿಯಮ್ಮ ದೇವಿಯ ಭವ್ಯ ದೇಗುಲ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ನಾಳೆ ಜನವರಿ 23 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ ನಿಧಿಕುಂಭ ಸ್ಥಾಪನೆ ನೆರವೇರಲಿದೆ.
ದೇಶದ 9 ಶಕ್ತಿ ಪೀಠಗಳ ಪ್ರಸಾದ.
ಕಾರಣಿಕದ ಮಾರಿಯಮ್ಮನ ನಿಧಿಕುಂಭ ಸ್ಥಾಪನೆಗೆ ದೇಶದ 9 ಶಕ್ತಿ ಪೀಠಗಳ ಪ್ರಸಾದ ಹಾಗೂ ಸ್ಥಳಿಯ ದೇವಿದೇಗುಲದ ಪ್ರಸಾದ ಸಂಗ್ರಹ ಕಾರ್ಯ ನಡೆದಿದ್ದು ಅದನ್ನು ಕಾಪುವಿನ ಒಡೆಯ ಲಕ್ಷ್ಮೀ ಜನಾರ್ಧನ ದೇಗುಲದಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಂದು ಪೇಜಾವರ ಶ್ರೀಗಳ ಅಮೃತಹಸ್ತದಿಂದ ನಿಧಿಕುಂಭಕ್ಕೆ ಸಮರ್ಪಿಸಲಾಗುತ್ತದೆ.
ಉರುಳು ಸೇವೆ ನಡೆಸಿದ ಅಭಿವೃದ್ಧಿ ಸಮಿತಿ ಸದಸ್ಯರು
ಮಾರಿಯಮ್ಮ ದೇಗುಲ ನಿರ್ಮಾಣ ಕಾರ್ಯ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿ ಎಂಬ ಉದ್ಧೇಶದಿಂದ ಹೊಸಮಾರಿಗುಡಿ ದೇಗುಲ ನಿರ್ಮಾಣದ ಅಭಿವೃದ್ಧಿ ಸಮಿತಿ ಸದಸ್ಯರಿಂದ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಉರುಳು ಸೇವೆಯ ಕಾರ್ಯವು ನಡೆದಿತ್ತು.

ಐತಿಹಾಸಿಕ ದೇಗುಲ ನಿರ್ಮಾಣದ ನಿಧಿಕುಂಭಕ್ಕೆ ಕ್ಷಣಗಣನೆ.
ವರ್ಷದಲ್ಲಿ ಮೂರು ಕಾಲಾವಧಿ ಮಾರಿಪೂಜೆ ಪಡೆದುಕೊಂಡು ಕುಲಕೋಟಿ ಮಾನವರನ್ನ ರಕ್ಷಿಸಿದ ಮಹತಾಯಿಯ ನೂತನ ದೇಗುಲ ನಿರ್ಮಾಣಕ್ಕೆ ಊರಪರವೂರ ಭಕ್ತರ ಸಮಾಗಮದಲ್ಲಿ ನಾಳೆಯ ದಿನ ನಿಧಿಕುಂಭ ಸ್ಥಾಪನೆಯಾಗಲಿದ್ದು , ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವಸಿದ್ಧತೆಗಳು ಪೂರ್ಣಗೊಂಡು ಕ್ಷಣಗಣನೆ ಆರಂಭವಾಗಿದೆ.
9 ಸಂಖ್ಯೆಗೆ ಹೆಚ್ಚಿನ ಒತ್ತು.
ಹೊಸಮಾರಿಗುಡಿಯಲ್ಲಿ ನವದುರ್ಗೆಯರ ಒಂಭತ್ತು ಸೋಪಾನ, ಒಂಭತ್ತು ಹಂತ,ಒಂಭತ್ತು ಗೋಪುರಗಳು ಇರುವಂತೆ ನವ ನಿರ್ಮಾಣ ಕಾರ್ಯ ನಡೆಯಲಿದೆ.ಮತ್ತು ಸಮಿತಿ ರಚನೆ ವಿಚಾರದಲ್ಲೂ 9 ಮಂದಿಯ ತಂಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
99 ಭಕ್ತಾದಿಗಳಿಂದ ದೀಪಗಳ ಪ್ರಜ್ವಲನೆ.
ನಿಧಿ ಕುಂಭ ಸ್ಥಾಪನೆಗೆ ಪೂರ್ವಭಾವಿಯಾಗಿ 99 ಮಂದಿ ಭಕ್ತರಿಂದ ಮಂತ್ರ ಘೋಷ ಹಾಗೂ ವಾದ್ಯ ಘೊಷಗಳೊಂದಿಗೆ ಏಕ ಕಾಲದಲ್ಲಿ ದೀಪ ಪ್ರಜ್ವಲನ ಕಾರ್ಯವೂ ನಡೆಯಲಿರುವುದು.
ದಶ ಸಾವಿರ ಭಕ್ತರ ನಿರೀಕ್ಷೆ, ಫಲಹಾರದ ವ್ಯವಸ್ಥೆ.
ಹೊಸ ಮಾರಿಯಮ್ಮ ಭವ್ಯದೇಗುಲ ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ನಾಳೆ ನಡೆಯುವಂತಹ ನಿಧಿ ಕುಂಭ ಸ್ಥಾಪನ ಕಾರ್ಯಕ್ಕೆ ಊರ ಪರವೂರಿನಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತಾಧಿಗಳ ದಂಡು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ,ಬರುವಂತಹ ಎಲ್ಲಾ ಭಕ್ತರಿಗೆ ಫಲಹಾರದ ವ್ಯವಸ್ಥೆಯನ್ನು ಸಂಘಟಕರು ಕಲ್ಪಿಸಲಿರುತ್ತಾರೆ.
ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಗಣ್ಯರ ದಂಡು
ನಿಧಿಕುಂಭ ಸ್ಥಾಪನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಶ್ರೀಗಳು,ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಶ್ರೀಮತಿ ಡಾ| ಜಯಮಾಲ,ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಸಚಿವರಾದ ಪರಮೇಶ್ವರ ನಾೈಕ್,ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಕೆ.ಪ್ರತಾಪ್‍ಚಂದ್ರ ಶೆಟ್ಟಿ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಹಾಗೂಎಮ್.ಎಲ್.ಸಿ ಕೋಟಾ ಶ್ರೀನಿವಾಸ್ ಪೂಜಾರಿ,ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್,ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ,ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಕಾರ್ಕಳ ಶಾಸಕ ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಅಧ್ಯಕ್ಷ ದಿನಕರ್ ಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ,ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ, ವಿನಯ್ ಕುಮಾರ್ ಸೊರಕೆ,ಕೇಂಜ ಶ್ರೀಧರ್ ತಂತ್ರಿ,ಜಿಲ್ಲಾದಿಕಾರಿ ಪ್ರಿಯಾಂಕ್ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾ ಪೋಲಿಸ್
ಅಧೀಕ್ಷಕರಾದ ಲಕ್ಷ್ಮಣ್ ನಿಂಬರ್ಗಿ ಸೇರಿದಂತೆ ಗಣ್ಯಾತಿ-ಗಣ್ಯರು ವೇದಿಕೆಯಲ್ಲಿ ಉಪಸ್ಥಿತಿ ಕಾಣಲಿದ್ದಾರೆ.
ದೇಗುಲ ನಿರ್ಮಾಣದ ಅಭಿವೃದ್ಧಿ ಸಮಿತಿ:
ಕಾಪು ಶ್ರೀ ಹೊಸ ಮಾರಿಯಮ್ಮ ದೇಗುಲ ನಿರ್ಮಾಣದ ಅಭಿವೃದ್ಧಿ ಸಮಿತಿಯ ಗೌರವಧ್ಯಕ್ಷರುಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್,ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ದುಬೈ ಮೂಲದ ಉದ್ಯಮಿ ಎನ್,ಎಮ್.ಸಿ ಯ ಆಡಳಿತ ನಿರ್ದೇಶಕರಾದ ಬಿ.ಆರ್ ಶೆಟ್ಟಿ ಭಾವು ಗುತ್ತು, ತುಂಗಾ ಗ್ರೂಪ್ ಆಫ್ ಹೋಟೆಲ್‍ನ ಆಡಳಿತ ನಿರ್ದೇಶಕ ಸುಧಾಕರ್ ಹೆಗ್ಡೆ,ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷರಾದ ಜಯ.ಸಿ.ಸುವರ್ಣ,ಎಮ್.ಆರ್,ಜಿ ಗ್ರೂಪ್‍ನ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ,ಚರಿಷ್ಮಾ ಬಿಲ್ಡರ್ ಮುಂಬೈನ ಆಡಳಿತ ನಿರ್ದೇಶಕರು ಸುಧೀರ್ ವಿ ಶೆಟ್ಟಿ, ಸಾಯಿಪ್ಯಾಲೇಸ್ ಹೋಟೆಲ್ ಮುಂಬಯಿ ಆಡಳಿತ ನಿರ್ದೇಶಕರು ರವಿ ಎಸ್ ಶೆಟ್ಟಿ,ಅನಿಲ್ ಬಲ್ಲಾಳ್ ಕಾಪು ಬೀಡು,ಅಧ್ಯಕ್ಷರಾಗಿ ಕೆ.ವಾಸುದೇವ ಶೆಟ್ಟಿ ಉಳಿಯಾರಗೋಳಿ, ಉಪಾಧ್ಯಕ್ಷರಾಗಿ ಕಾಪು ದಿವಾಕರ್ ಶೆಟ್ಟಿ,ಮಾಧವ ಆರ್ ಪಾಲನ್,ಡಾ.ದೇವಿಪ್ರಸಾದ್ ಶೆಟ್ಟಿ,ಗಂಗಾಧರ್ ಸುವರ್ಣ,ಮನೋಹರ್ ಶೆಟ್ಟಿ, ಕಾರ್ಯದರ್ಶಿಯಾಗಿ ರಮೇಶ್ ಹೆಗ್ಡೆ ಕಲ್ಯಾ,ಜೊತೆ ಕಾರ್ಯದರ್ಶಿಯಾಗಿ ನಿರ್ಮಾಲ್ ಕುಮಾರ್ ಹೆಗ್ಡೆ,ಕೋಶಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರುಗಳಾಗಿ ಕೆ.ಪಿ ಆಚಾರ್ಯ,ರಾಮ ಶ್ರೀಯಾನ್,ರಾಘವೇಂದ್ರ ತಂತ್ರಿ, ಸಚ್ಚಿದಾನಂದ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ,ಎರ್ಮಾಳ್ ವೈ ಶಶಿಧರ್ ಶೆಟ್ಟಿ, ಡಾ.ಪ್ರಭಾಕರ್ ಶೆಟ್ಟಿ,ಸುಬ್ರಮಣ್ಯ ಶೆಟ್ಟಿ, ಮತ್ತು ನಡಿಕೆರೆ ರತ್ನಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಹಾಗೂ ಊರ ಪರವೂರ ದಾನಿಗಳ ಸಹಕಾರದೊಂದಿಗೆ ಭವ್ಯ ದೇಗುಲ ನಿರ್ಮಾಣವಾಗಲಿದೆ.
ವರದಿ : ಪುರುಷೋತ್ತಮ್ ಸಾಲ್ಯಾನ್ ಮೂಳೂರು
ವಿಶ್ವನ್ಯೂಸ್24

