ನಾಳೆ ತವರೂರಿಗೆ ಸಚಿವ ಕೋಟ: ಸ್ವಾಗತ ಸಂಭ್ರಮಾಚರಣೆಗೆ ಕಡಿವಾಣ ಹಾಕಿ ಎಂದು ಟ್ವೀಟ್

Featured, ಉಡುಪಿ

ಉಡುಪಿ: ನಾಳೆ (ಗುರುವಾರ) ಪ್ರವಾಹ ಪರಿಸ್ಥಿತಿಯ ಕುರಿತು ಪರಿಹಾರಾರ್ಥ ಪ್ರಗತಿ ಪರಿಶೀಲನೆ ಮಾಡಲು ಬೆಳಿಗ್ಗೆ ಮಂಗಳೂರು, ಮಧ್ಯಾಹ್ನ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಛೇರಿಗೆ ಭೇಟಿ ನೀಡಲಿದ್ದು ರಾಜ್ಯ ಪ್ರವಾಹ ಎದುರಿಸುತ್ತಿರುವಾಗ ಪ್ರೀತಿಯ ಸ್ವಾಗತವು ಸೇರಿದಂತೆ, ಸಂಭ್ರಮಾಚರಣೆಗೆ ಕಡಿವಾಣ ಹಾಕೋಣ. ನಿಮ್ಮ ಸಹಕಾರವಿರಲಿ ಎಂದು ರಾಜ್ಯ ಸಂಪುಟ ದರ್ಜೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಪ್ರವಾಸ:

ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಸ್ಟ್ 22 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 2.45 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಪರಿಶೀಲನೆ ಸಭೆ ನಡೆಸುವರು, ಸಂಜೆ 4 ಗಂಟೆಗೆ ಜಿಲ್ಲಾ ಬಿ.ಜೆ.ಪಿ ಕಚೇರಿ ಭೇಟಿ, ಸಂಜೆ 6 ಗಂಟೆಗೆ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ ಭೇಟಿ, 6.30 ಕ್ಕೆ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಕೋಟದಲ್ಲಿ ವಾಸ್ತವ್ಯ ಮಾಡುವರು.