ನಾಳೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ .. ಯಾರಾಗಲಿದ್ದಾರೆ ಬಿಜೆಪಿಯ ನೂತನ ಸಾರಥಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ನೂತನ ಸಾರಥಿ ಆಯ್ಕೆ ನಾಳೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯನ್ನು ಜ.12ರೊಳಗೆ ಪೂರ್ಣ ಗೊಳಿಸುವಂತೆ ರಾಜ್ಯ ಬಿಜೆಪಿ ಘಟಕದಿಂದ ಈಗಾಗಲೇ ಸೂಚನೆ ಬಂದಿದೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್‌ ಸುರಾನಾ ಈ ಸಂಬಂಧ ವೀಕ್ಷಕರಾಗಿ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷಾಕಾಂಕ್ಷಿಗಳಿಂದ ನಾಮಪತ್ರ ಸ್ವೀಕರಿಸಿ, ಅಭಿಪ್ರಾಯ ಆಲಿಸಿದ ಬಳಿಕ ನೂತನ ಅಧ್ಯಕ್ಷರನ್ನು ಘೋಷಿಸಲಿದ್ದಾರೆ. ಪಕ್ಷದ ನಿಯಮದ ಪ್ರಕಾರ ಹಾಲಿ ಅಧ್ಯಕ್ಷ ಸಂಜೀವ ಮಠಂದೂರು ಅವರ ಅಧಿಕಾರಾವಧಿ ಸೆಪ್ಟಂಬರ್‌ನಲ್ಲಿ ಪೂರ್ಣಗೊಂಡಿದೆ.

ಪಕ್ಷದ ಜಿಲ್ಲಾಧ್ಯಕ್ಷತೆಗೆ ಪ್ರಸ್ತುತ ಜಿಲ್ಲಾ ಪ್ರ. ಕಾರ್ಯದರ್ಶಿಗಳಾಗಿರುವ ಸುದರ್ಶನ ಎಂ. ಮತ್ತು ಕ್ಯಾ| ಬೃಜೇಶ್‌ ಚೌಟ ಅವರ ಹೆಸರು ಮುನ್ನೆಲೆಯಲ್ಲಿ ಕೇಳಿಬರುತ್ತಿವೆ.

ವಯೋಮಿತಿ 55 ವರ್ಷ:
ಬಿಜೆಪಿಯಲ್ಲಿ ಈ ಬಾರಿ ಮಂಡಲ ಮತ್ತು ಜಿಲ್ಲಾ ಅಧ್ಯಕ್ಷತೆಗೆ ವಯೋಮಿತಿ ನಿಗದಿ ಪಡಿಸಲಾಗಿದೆ. ಮಂಡಲ ಸಮಿತಿ ಅಧ್ಯಕ್ಷತೆಗೆ 50 ವರ್ಷ ಮತ್ತು ಜಿಲ್ಲಾಧ್ಯಕ್ಷತೆಗೆ 55 ವರ್ಷದ ಒಳಗಿನವರು ಅರ್ಹರಾಗುತ್ತಾರೆ. ಪಕ್ಷದಲ್ಲಿ ಯುವಶಕ್ತಿಯನ್ನು ಮುಂಚೂಣಿಗೆ ತರಲು ಈ ನಿಯಮ. ಪಕ್ಷದ ಜಿಲ್ಲಾಧ್ಯಕ್ಷತೆಗೆ ಪ್ರಸ್ತುತ ಜಿಲ್ಲಾ ಪ್ರ. ಕಾರ್ಯದರ್ಶಿಗಳಾಗಿರುವ ಸುದರ್ಶನ ಎಂ. ಮತ್ತು ಕ್ಯಾ. ಬೃಜೇಶ್‌ ಚೌಟ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಸಂಜೀವ ಮಠಂದೂರು 2016ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗೆ 52 ವರ್ಷವಾಗಿದ್ದು, ಪ್ರಸ್ತುತ ಇರುವ ವಯೋಮಿತಿ ಮಾನದಂಡ ಅವರ ವಿಚಾರದಲ್ಲಿ ಅಂದೇ ಪಾಲನೆಯಾಗಿತ್ತು. ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ವಿಧಾನಸಭೆ, ಲೋಕಸಭೆ ಮತ್ತು ಮನಪಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದೆ.

SHARE.
error: Content is protected !!