ನಾಳೆಯಿಂದ ಮಂಗಳೂರು – ಮಡಗಾಂವ್ ವಂದೇ ಭಾರತ್‌ ರೈಲು ಆರಂಭ – vishwanews24

Featured, ಉಡುಪಿ, ದಕ್ಷಿಣ ಕನ್ನಡ

ನಾಳೆಯಿಂದ ಮಂಗಳೂರು – ಮಡಗಾಂವ್ ವಂದೇ ಭಾರತ್‌ ರೈಲು ಆರಂಭ

ಮಂಗಳೂರು : ಮಂಗಳೂರು ಹಾಗೂ ಮಡಗಾಂವ್ ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿ ಪೂರೈಸಿದೆ. ಡಿ 30 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು‌ ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆಯನ್ನು ನೀಡಲಿದ್ದಾರೆ.

ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳಿಗೆ  ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ – vishwanews24

ವಂದೇ ಭಾರತ್ ಎಕ್ಸ್ ಪ್ರೆಸ್ ಮಂಗಳೂರು ಮಡಗಾಂವ್ ರೈಲು 320 ಕಿಮೀ ಓಡಾಟ ಮಾಡಿದ್ದು, ಯಾವುದೇ ಸಮಸ್ಯೆಗಳು ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಡಗಾಂವ್ ಸಂಚಾರದ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ನಿಲುಗಡೆಗಳು ಇರಲಿವೆ.

Leave a Reply