ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ : ಸಿದ್ದರಾಮಯ್ಯ – Vishwanews24
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಭಯ ಬಿಜೆಪಿ ನಾಯಕರಿಗೆ ಉಂಟಾಗಿದೆ..
ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ..
ಬೆಂಗಳೂರು: ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ ಎಂದು BSY ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಭಯ ಬಿಜೆಪಿ ನಾಯಕರಿಗೆ ಉಂಟಾಗಿದೆ. ಆ ಭಯದಿಂದಲೇ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇಲ್ಲ ಅಂದ್ರೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಾ ಇದ್ದರು.
ಅವರಿಗೆ ಸಿದ್ಧರಾಮೋತ್ಸವದ ನಂತ್ರ ಸೋಲಿನ ಭಯ ಹುಟ್ಟಿಕೊಂಡಿದೆ ಎಂಬುದಾಗಿ ಹೇಳಿದರು. ಇನ್ನೂ ದೊಡ್ಡಬಳ್ಳಾಪುರದ ಜನಸ್ಪದಂದನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರು ಇರೋವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡೋದಿಲ್ಲ ಎಂಬ ಮಾತಿಗೆ ಉತ್ತರಿಸಿದಂತ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದನ್ನು ನಿರ್ಧರಿಸೋದು ಬಿಎಸ್ ಯಡಿಯೂರಪ್ಪ ಅಲ್ಲ. ಈ ರಾಜ್ಯದ ಜನರಾಗಿದ್ದಾರೆ ಎಂದು ಹೇಳಿದರು.
ಉಡುಪಿ : ಪಡಿತರ ಪಡೆಯಲು ಆಧಾರ್ ಬಯೋ ದೃಢೀಕರಣ ನೀಡುವ ಬಗ್ಗೆ – Vishwanews24
