ನಾವು ಬಿಜೆಪಿ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ: ಮಮತಾ ಬ್ಯಾನರ್ಜಿ -Vishwanews24
ನಾವು ಬಿಜೆಪಿ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ: ಮಮತಾ ಬ್ಯಾನರ್ಜಿ -Vishwanews24
ಕೋಲ್ಕತ್ತಾ: ಬಿಜೆಪಿಗರು ಮಾವೋವಾದಿಗಳಿಗಿಂತಲೂ ಹೆಚ್ಚು ಅಪಾಯಕಾರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ಬಿಜೆಪಿ ನೀಡುತ್ತಿದೆ. ರಾಜಕೀಯ ಎನ್ನುವುದು ಹೊಣೆಗಾರಿಕೆಯಿಂದ ಕೂಡಿದ ಸಿದ್ಧಾಂತ. ಇದನ್ನು ಬಟ್ಟೆ ಬದಲಾಯಿಸಿದಂತೆ ದಿನವೂ ಬದಲಾಯಿಸಲು ಸಾಧ್ಯವಿಲ್ಲ. ಯಾರು ಬಿಜೆಪಿಯನ್ನು ಸೇರಲು ಬಯಸುತ್ತೀರೊ ಅವರು ತೆರಳಬಹುದು. ಆದರೆ ನಾವು ಆ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ” ಎಂದು ಹೇಳಿದ್ದಾರೆ.
“ಬಿಜೆಪಿ ನಾಯಕರು ಜಂಗಲ್ಮಹಲ್ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡಿದ್ದ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಡೆ ತಲೆ ಹಾಕಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
